ನಮಸ್ಕಾರ,
ರಾಜ್ಯೋತ್ಸವ ಸಂದರ್ಭದ ಶುಭಾಶಯಗಳು.💐
ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತ್ಯ ಪ್ರಕಾಶನವು ಬೇರೆಬೇರೆ ರಿಯಾಯ್ತಿ ಯೋಜನೆಗಳನ್ನು ಹರವಿಟ್ಟುಕೊಂಡುದನ್ನು ತಾವು ಬಲ್ಲಿರಿ. ಈಗ ಕನ್ನಡದ ಬಹು ಜನಪ್ರಿಯ ಅಂಕಣಕಾರ ಶ್ರೀ ಶ್ರೀವತ್ಸ ಜೋಶಿ ಅವರ ಕೃತಿಗಳಿಗೆ ರಿಯಾಯ್ತಿ ಯೋಜನೆ.
ಶ್ರೀವತ್ಸ ಅವರ ನಾಲ್ಕು ಹೊಸ ಕೃತಿಗಳು ನವಂಬರ್ 5ರಂದು ಹೊರಬರುತ್ತಿವೆ. ಅದರಲ್ಲಿ “ತಿಳಿರು ತೋರಣ- ಪರ್ಣಮಾಲೆ” ೬, ೭, ೮ ಸಂಪುಟಗಳು ಮತ್ತು ಅವರದೊಂದು ತುಂಬ ವಿಶಿಷ್ಟ ಕೃತಿ “ ಸ್ವಚ್ಛ ಭಾಷೆ ಅಭಿಯಾನ- ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ” ಎಂಬವು.
ತಿಳಿರು ತೋರಣದ ಈ ಸಂಪುಟಗಳ ಬೆನ್ನುಡಿಯಲ್ಲಿ ಹೀಗಿದೆ:
——-
ಶ್ರೀವತ್ಸ ಜೋಶಿ ಅವರ ಅಂಕಣವನ್ನು ವಾರವಾರವೂ ಕುತೂಹಲದಿಂದ ನಿರೀಕ್ಷಿಸಿ ಓದುವವರ ಬಳಗ ತುಂಬ ವಿಸ್ತಾರವಾದುದು. ಕನ್ನಡಿಗರಿರುವ ವಿಶ್ವದ ಎಲ್ಲ ದೇಶಗಳಲ್ಲೂ ಅವರ ಓದುಗರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಬರಹಗಳನ್ನು ಓದಿ, ಮೆಚ್ಚಿ, ವಿಮರ್ಶಿಸಿ, ಸ್ನೇಹಿತರಾಗಿ, ಮುಂದಿನ ಬರಹಕ್ಕಾಗಿ ಕಾಯುವಂತಹ ಓದುಗರನ್ನು ವಿಶ್ವದ ಎಲ್ಲೆಡೆಯೂ ಹೊಂದಿರುವ ಲೇಖಕ ಬಹುಶಃ ಶ್ರೀವತ್ಸರೊಬ್ಬರೇ ಇರಬೇಕು.
ಯಾವ ಬಗೆಯ ಅಂಕಣ ಅವರದು ಎಂದು ಯಾರಾದರೂ ಕೇಳಿದರೆ ಹೇಳಲಾಗದು. ತುಂಬ ರುಚಿಕಟ್ಟಾದುದು ಎಂದು ಮಾತ್ರ ಹೇಳಬಹುದು. ಅಲ್ಲಿ ಭಾಷೆಯ ಕೌತುಕ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಗಣಿತ, ಭೂಗೋಳ, ಸಂಗೀತ, ಸಿನಿಮಾ,ಇತಿಹಾಸ, ಪರಿಸರ-ಪ್ರಾಣಿ,ಅಡುಗೆ -ತಿಂಡಿ- ರುಚಿ ವೈವಿಧ್ಯ, ಸಂಪ್ರದಾಯ-ಆಚರಣೆಗಳು,ವ್ಯಕ್ತಿ ವಿಶೇಷ – ಅಯ್ಯೋ ಅಯ್ಯೋ …ಹೀಗೆ ಅವರ ಬ್ಯಾಟು ಲೋಕವೆಂಬ ಮೈದಾನದ ಯಾವ ಕಡೆಯೂ ಬೀಸುತ್ತಿರುತ್ತದೆ!
ಶ್ರೀವತ್ಸ ಜೋಶಿಯವರು ಅರಸಿಕೊಂಡು ಆರಿಸಿಕೊಂಡು, ಪರಿಪೂರ್ಣವೆನಿಸುವ ಮಾಹಿತಿಗಳಿಂದ, ಕುತೂಹಲಕರ ಸಂಗತಿಗಳಿಂದ, ವಿಸ್ಮಯ – ಲಾಲಿತ್ಯಗಳಿಂದ ಪಕ್ವಗೊಳಿಸಿ , ಆ ಅಂಕಣವನ್ನು ಪೋಷಿಸಿ ಆಧರಿಸಿ ಪ್ರಸ್ತುತ ಪಡಿಸುವ ರೀತಿಯೇ ಅಮೋಘವಾದುದು. ಓದುಗನಿಗೆ ಹಿಡಿದಿಟ್ಟುಕೊಂಡು ಮತ್ತೆಮತ್ತೆ ಓದುವಂತೆ ಮಾಡುವಂಥದು. ಒಂದೊಂದು ಅಂಕಣವನ್ನು ಓದಿದಾಗಲೂ ಒದಗುವ ಪ್ರಫುಲ್ಲತೆ, ತೃಪ್ತಿ , ಸಂತೋಷಗಳು ಬೆಲೆ ಕಟ್ಟಲಾಗದಂಥವು. ದಶಕಗಳ ಕಾಲವಾದರೂ ಯಾವ ಲೇಖನವೂ ಓದುಗನಿಗೆ ನಿರಾಸೆ ತಂದಿಲ್ಲ. ಅದೇ ಸೋಜಿಗ, ಅದೇ ಸತ್ವ! ಇಷ್ಟು ದೀರ್ಘಕಾಲ ಹಾಗೆ ಕಾಪಾಡಿಕೊಳ್ಳುವುದು ಎಂಥ ಬರಹಗಾರನಿಗೂ ಕಷ್ಟವೇ. ಶ್ರೀವತ್ಸರು ಅದನ್ನು ಸಾಧಿಸಿಕೊಂಡು ಬರೆಯುತ್ತಲೇ ಇದ್ದಾರೆ, ಬೆಳೆಯುತ್ತಲೇ ಇದ್ದಾರೆ. ಅದಕ್ಕೆ ಅಲ್ಲವೇ ಅವರ ಓದುಗರ ಸಂಖ್ಯೆ , ಅಭಿಮಾನಿಗಳ ಸಂಖ್ಯೆ ದಿನದಿನಕ್ಕೂ ಸಮೃದ್ಧಗೊಳ್ಳುತ್ತಿದೆ.
ಸದಭಿರುಚಿಯ ಘಮ ಪಸರಿಸುತ್ತಿದೆ!
————-
ಈ ನವಂಬರ್ ಪೂರ್ತಿ ಈ ನಾಲ್ಕು ಕೃತಿಗಳ ರವಾನೆ ವೆಚ್ಚವೂ ಸೇರಿ ೧೧೦೦/- ರೂ. ಬದಲು ೯೦೦/- ರೂಪಾಯಿಗಳಿಗೆ, ಮತ್ತು
ಮೊದಲಿನ ಐದು ತಿಳಿರು ತೋರಣದ ಸಂಪುಟಗಳಿಗೂ ೧೨೦೦/-( ಅಂಚೆವೆಚ್ಚ ೧೦೦/- ಸೇರಿ) ರೂಪಾಯಿಗಳಾಗುತ್ತದೆಯಾದರೂ
೯೦೦/- ರೂಪಾಯಿಗಳಿಗೇ ಕೊಡಬೇಕೆಂಬ ನಿರ್ಧಾರ ನಮ್ಮದು.
ಶ್ರೀವತ್ಸ ಜೋಶಿಯವರ ೯ ಕೃತಿಗಳ ಓದು ಮತ್ತು ಆ ನಂತರದ ಪ್ರಫುಲ್ಲತೆಯ ಅನುಭವ ತಮ್ಮದಾಗಲಿ.
ಈಗ ತಾವು ಪುಸ್ತಕ ತರಿಸಿಕೊಳ್ಳಲು ಈ ನಮ್ಮ ವೆಬ್ ಸ್ಟೋರಿಗೆ ಹೋಗಿ ಬುಕ್ ಮಾಡಿ.
ಶ್ರೀವತ್ಸ ಜೋಶಿ ಹೊಸ ನಾಲ್ಕು 900/-
ಶ್ರೀವತ್ಸ ಜೋಶಿ ಎಲ್ಲ ೯
೧೮೦೦/-
ಬಿಡಿಯಾಗಿಯೂ ಲಭ್ಯ
ತಲಾ ೨೨೫/-