Sale!

Premshekhar new 2

260.00

ನಮಸ್ತೇ!

ಅಂದಹಾಗೆ ಹಿರಿಯ ಲೇಖಕ ಶ್ರೀ ಪ್ರೇಮಶೇಖರ ಅವರ ಎರಡು ಕೃತಿಗಳು ಹೊರಬರುತ್ತಿವೆ. ಸೃಜನೇತರ ಬರಹಗಳಲ್ಲೂ ಅಂದರೆ, ರಾಜಕೀಯ ಮತ್ತು ಅಂತರ್ರಾಷ್ಟ್ರೀಯ ಸಂಬಂಧಗಳು ಮತ್ತು ವಿದ್ಯಮಾನಗಳ ಕುರಿತು ಅವರಷ್ಟು ಆಳವಾಗಿಯೂ ನಿಖರವಾಗಿಯೂ ವಿಶ್ಲೇಷಿಸಬಲ್ಲ ಕನ್ನಡದ ಬೇರೆ ಚಿಂತಕರಾಗಲೀ ಅಂಕಣಕಾರರಾಗಲೀ ಇಲ್ಲವೆನ್ನುವೆಷ್ಟು ಜನಪ್ರಿಯರು ಅವರು. ಹಾಗಂತ, ಕತೆ- ಕಾದಂಬರಿ- ಕವಿತೆಗಳ ಸೃಷ್ಟಿಯೂ ಅವರಿಂದ ಅಷ್ಟೇ ಲೀಲಾಜಾಲ. ಅವರ ಬೊಳ್ಳೊಣಕಯ್ಯ ಕಾದಂಬರಿಯನ್ನು ಈಗ ನಾಲ್ಕಾರು ವರ್ಷಗಳ ಹಿಂದೆ ಓದಿದ ಭೈರಪ್ಪನವರು ತಕ್ಷಣವೇ ನನಗೆ ಫೋನ್ ಮಾಡಿ, ಈ ಪುಟ್ಟ ಕಾದಂಬರಿ ತುಂಬ ಚನ್ನಾಗಿದೆ, ಯಾರಿವರು ಪ್ರೇಮಶೇಖರರು, ಏನಿವರ ಹಿನ್ನೆಲೆ – ಎಂದೆಲ್ಲ ಕೇಳಿತಿಳಿದುಕೊಂಡಿದ್ದರು. ಆ ದಿನಗಳ ನಂತರ ನಾನು ಅವರಿಬ್ಬರನ್ನೂ ದಿಗ್ವಿಜಯ ಟೀವಿಯ ಒಂದು ವಿಶೇಷ ಕಾರ್ಯಕ್ರಮದಲ್ಲಿ ಸಂಯೋಜನೆಯ ಏರ್ಪಾಟು ಮಾಡಿದ್ದೆ. ಪ್ರೇಮಶೇಖರರು ಕನ್ನಡದ ತುಂಬ ಜನಪ್ರಿಯ ಲೇಖಕರೂ ಅಂಕಣಕಾರರಾಗಿಯೂ ಹೆಸರಾದವರು. ವಿಜಯವಾಣಿಯ ಇವರ ಜಗದಗಲ ಅಂಕಣವಂತೂ ತುಂಬ ಜನಪ್ರಿಯ. ಭೈರಪ್ಪ, ಕೆಎಸ್ ನಾರಾಯಣಾಚಾರ್ಯರಂಥವರಿಗೂ ತುಂಬ ಮೆಚ್ಚಿಗೆಯ ಅಂಕಣವದು. ಇರಲಿ. ಪ್ರೇಮಶೇಖರ ಅವರ ಒಟ್ಟು ಹದಿನಾರು ಕೃತಿಗಳನ್ನು ಸಾಹಿತ್ಯ ಪ್ರಕಾಶನವು ಪ್ರಕಟಿಸಿದೆ. ಆ ಪೈಕಿ ಈಗ ಹೊರಬರುತ್ತಿರುವ ಕಿರು ಕಾದಂಬರಿ “ಮಳೆ” ಮತ್ತು ಕಥಾಸಂಕಲನ “೧೧:೧೧” ಕೂಡ ಸೇರಿವೆ. ಹೇಗಿವೆ ಎಂದು ಕೇಳಿದರೆ ಏನು ಹೇಳಲಿ? “ಖಂಡಿತ ಓದಿ! ಓದುವ ಥ್ರಿಲ್ ಓದಿಯೇ ಅನುಭವಿಸಿ” ಎಂದು ಮಾತ್ರ ಹೇಳಬಲ್ಲೆ.
ಅಂದಹಾಗೆ, ಇನ್ನೇನು ಓದುಗರ ಕೈ ಸೇರಲಿರುವ ಆ ಎರಡು ಕೃತಿಗಳ ಬೆಲೆ: 330/- ರೂ ಮಾತ್ರ. ಈ ಜನವರಿ 31 ರ ಒಳಗೆ ನಮ್ಮ ವೆಬ್ ಸ್ಟೋರಿನಲ್ಲಿ ಬುಕ್ ಮಾಡಿದರೆ, ಅಂಚೆವೆಚ್ಚವೂ ಸೇರಿ 260/- ರೂ ಮಾತ್ರ.

Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034