Reviews

Sahitya Prakashana – Sadabhiruchiya Sangaati
Since 1986

Authors reviews

What they say?

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮತ್ತು ಅದರ ಮಾಲೀಕರಾದ ಶ್ರೀ ಎಂ. ಎ. ಸುಬ್ರಹ್ಮಣ್ಯ ಅವರೂ ನಾವೂ ಸಾಹಿತ್ಯ ಕುಟುಂಬದ ಸಮಾನ ಬಂಧುಗಳಾಗಿದ್ದೇವೆ. ರಕ್ತ, ದಾಯಾದರ ಬಾಂಧವ್ಯಕ್ಕಿಂತ, ಮೌಲ್ಯಾತ್ಮಕ, ಸಾಹಿತ್ಯಸುಧೆಯ ಹಂಚಿಕೆಯ, ಆತ್ಮೀಯ ಬಾಂಧವ್ಯ ಹೆಚ್ಚು ದೃಢ, ವಿಶ್ವಾಸಾರ್ಹ ಮತ್ತು ಲೋಕೋಪಕಾರಕ ಎಂದು ನಾನು, ಈ ಸಂಬಂಧ ಬೆಳೆದ ಸುಮಾರು ಇಪ್ಪತ್ತು ವರ್ಷಗಳಿಂದಲೂ ನಂಬಿದ್ದೇನೆ. ಎಲ್ಲ ಪ್ರಕಾಶಕರೂ ತಮ್ಮ ಬಳಿ ಬಂದ ಎಲ್ಲಾ ಪುಸ್ತಕಗಳನ್ನೂ ಓದುವುದಿಲ್ಲ, ಬರೆದವರನ್ನು ಹಚ್ಚಿಕೊಳ್ಳುವುದೂ ಇಲ್ಲ! ಅದು ವ್ಯಾಪಾರೀ ಮನೋಭಾವದಲ್ಲಿ ನೆಲೆನಿಂತ ಸಾಮಾನ್ಯ ತಾತ್ಕಾಲಿಕ ಸಂಬಂಧ. ನನ್ನದು ಸುಬ್ರಹ್ಮಣ್ಯ ಅವರದೂ ಹಾಗಲ್ಲ. Unique ಎಂಬುದನ್ನು ಇಬ್ಬರ ನಡುವಿನ ಅನೇಕಾನೇಕ ಸ್ನೇಹಿತರೂ, ಓದುಗರೂ, ಸಾಹಿತ್ಯ ಬಾಂಧವರೂ ಬಲ್ಲರು. ಅವರ ಸುಪುತ್ರ ಶ್ರೀ ಋತ್ವಿಕ ಈಗ ಇದೇ ನೆರಳಲ್ಲಿ ‘‘ಸುಬ್ಬು’’ ಎಂಬ ಒಂದು ಆಂಗ್ಲ ಪ್ರಕಾಶನ ಸ್ಥಾಪಿಸಿ, ಹತ್ತಾರು ಮೌಲ್ಯಾತ್ಮಕ, ವಿಶ್ವವ್ಯಾಪಿ ಗ್ರಂಥಗಳನ್ನು ಹೊರತಂದಿದ್ದು, ನನ್ನ ಆಶೀರ್ವಾದವಿದೆ. ಇಂಗ್ಲೆಂಡಿನ Macmillan ಅಥವಾ ಇತರ ಶತಮಾನಗಳ ಹಳೆಯ ಪ್ರಸಿದ್ಧ ಪುಸ್ತಕಪ್ರಿಯರ ಆದರಣೀಯ ಸಂಸ್ಥೆಗಳಂತೆ ಇವರ ಪ್ರಕಾಶನವೂ Premier ಎಂಬ ಮಟ್ಟಕ್ಕೆ ಬೆಳೆಯಬೇಕೆಂದು ನನ್ನ ಆಸೆ. ಅದು ನೆರವೇರುತ್ತಲೂ ಬರುತ್ತಿದೆ ಎಂಬುದು ಸಂತೋಷ. ಸುಬ್ರಹ್ಮಣ್ಯ ಅವರಿಗೆ ಓದು ಇದೆ, ಧೈರ‌್ಯ ಇದೆ, ಬರೆಹಗಾರರ ಪ್ರತಿಭೆ ಗುರುತಿಸುವ ಚುರುಕುತನ, ಓದುಗರ ನಾಡಿ ಪರೀಕ್ಷೆ, ಮನೆಮನೆಗೆ ಪುಸ್ತಕ ಮುಟ್ಟಿಸುವ ಯೋಜನೆಗಳು, ಛಲ, ಸಾಂಸ್ಕೃತಿಕ ಬೇರು ಭದ್ರತೆ, ಜನಾದರಣೆ, ನವನವ ಬರೆಹಗಾರರನ್ನು ಪ್ರೋತ್ಸಾಹಿಸುವ ಗುಣ, ಸಹನೆ, ಏನೆಲ್ಲ ಮೌಲ್ಯಗಳ ಗಣನೆಯಲ್ಲಿ ಬರುತ್ತದೋ, ಅದೆಲ್ಲ ಇದೆ. ಅವರದು ಅಕ್ಷಯ Resourcefulness.. ಇಂಥ ಮಹನೀಯರ ಸಂಸ್ಥೆ ಈಗ ತನ್ನದೇ Website ಸ್ಥಾಪಿಸುತ್ತಿರುವುದು ತೃಪ್ತಿ.
-ಕೆ. ಎಸ್. ನಾರಾಯಣಾಚಾರ್ಯ
23-4-2020​
My association with Sahitya prakashana, Hubli is more than 30 years. Except for few earlier books, Sahitya prakashana has published all my translations from telugu, both Novels and Personality development books. I am proud and happy that my books are along with the great authors like SL Bhyrappa and others from this publishing house. Subrahmanya is not only my publisher, but also a great friend. He always keeps a smile on his face. That is the best thing i like because in all my personality development books, i define 'success' as continuous smiling. I wish Sahitya prakashana all the best in future.
Yandamoori Veerendranath.
ಸಾಹಿತ್ಯ ಪ್ರಕಾಶನದ ಬರಹಗಾರರಲ್ಲಿ ನಾನೂ ಒಬ್ಬ ಎನ್ನುವುದು ನನಗೆ ಹೆಮ್ಮೆಯ ವಿಷಯ.ಹಲವಾರು ದಶಕಗಳಿಂದಲೂ ಸುಬ್ರಹ್ಮಣ್ಯ ಓದುಗರಿಗೆ ಸದಭಿರುಚಿಯ ಕೃತಿಗಳನ್ನು ನೀಡುತ್ತ ಬಂದಿದ್ದಾರೆ. ದೇಶದ ಯುವ ಜನತೆ ಮುಂದೆ ಬರಬೇಕು ಹಾಗೂ ನಮ್ಮ ಭವ್ಯ ದೇಶವು ಇನ್ನೂ ಅಭಿವೃದ್ಧಿ ಹೊಂದಬೇಕೆನ್ನುವ ಘನ ಉದ್ದೇಶದಿಂದ ಅವರು ಮೌಲಿಕ ಹಾಗೂ ಸ್ಫೂರ್ತಿದಾಯಕ ಪುಸ್ತಕಗಳನ್ನೇ ಪ್ರಕಟಿಸುತ್ತ ಬಂದಿದ್ದಾರೆ. ಪ್ರಕಾಶನದ ಹೊಸ ವೆಬ್ ಸೈಟ್ ಮೂಲಕ ಉತ್ತಮ ಪುಸ್ತಕಗಳು ಓದುಗರನ್ನು ಬೇಗನೇ ಮುಟ್ಟಲು ಸಾಧ್ಯವಾಗುವ ಹೊಸ ಸೌಲಭ್ಯವು ವ್ಯಾಪಕವಾಗಿ ಬಳಕೆಯಾಗಲೆಂದು ಆಶಿಸುತ್ತೇನೆ.
- ಡಾ|| ಡಿ.ವಿ.ಗುರುಪ್ರಸಾದ್
ನಿವೃತ್ತ ಡಿಜಿಪಿ.
ಸಾಹಿತ್ಯ ಪ್ರಕಾಶನವು ಮೌಲ್ಯಬದ್ಧವಾದ ಸಾಹಿತ್ಯವನ್ನು ಲೇಖಕರಿಂದ ಓದುಗರಿಗೆ ನೇರವಾಗಿ ತಂದೊಪ್ಪಿಸುವ ಸ್ತುತ್ಯ ಕಾರ್ಯವನ್ನು ದಶಕಗಳುದ್ದಕ್ಕೂ ಮಾಡಿಕೊಂಡು ಬಂದಿದೆ.ಈ ಕಡಿದಾದ ಹಾದಿಯಲ್ಲಿ ಅದು ಸಾಧಿಸಿದ ವಿಕ್ರಮಗಳು ಹತ್ತಾರು. ಮುಖ್ಯವಾಗಿ ಈ ಕಾಲದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಧಾನವಾಗಿ ನೆಮ್ಮಿ ಅದು ನಡಸುತ್ತಿರುವ ಸಾರಸ್ವತ ಸೇವೆ ನಮಗೆಲ್ಲ ಹೆಮ್ಮೆ ತರುವಂಥದ್ದು. ಮೂರು ತಲೆಮಾರಿನ ಈ ಸಾಹಸ ಮತ್ತೂ ಹತ್ತಾರು ತಲೆಮಾರುಗಳಿಗೆ ವಿಸ್ತರಿಸಿಕೊಳ್ಳಲಿ. ಇದಕ್ಕೆ ಅಂತರ್ಜಾಲದ ಜಗತ್ತು ಸಹಕಾರಿಯಾಗಲಿ.
- ಶತಾವಧಾನಿ ಡಾ. ಆರ್ ಗಣೇಶ್.
Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034