ಪೂಜ್ಯ ಶ್ರೀ ಕೆಎಸ್ ನಾರಾಯಣಾಚಾರ್ಯ ಅವರ ವಾಚಕರಿಗೆಲ್ಲ ಮತ್ತೊಂದು ಖುಶಿಯ ಸಂಗತಿ!!
ಮೊನ್ನೆಮೊನ್ನೆ ತಾನೆ ಅವರ ಉರ್ವಶಿ-ಪುರೂರವ, ಅಗ್ನಿಹೋತ್ರ ತತ್ವ ಮತ್ತು ನಹುಷ ತಮ್ಮ ಕೈಸೇರಿದ್ದು, ತಾವು ಓದುತ್ತಿರಬಹುದು; ಕೆಲವರು ಓದಿಯೂ ಮುಗಿಸಿರಬಹುದು! ಆಚಾರ್ಯರು ಮಹಾಭಾರತ ಆದಿಪರ್ವದ ಪಾತ್ರಗಳನ್ನು, ವ್ಯಕ್ತಿತ್ವಗಳನ್ನು – ವ್ಯಾಸದರ್ಶನಕ್ಕನುಸಾರವಾಗಿಯೇ, ಅಂದರೆ ಮೂಲದರ್ಶನಕ್ಕೆ ಕಿಂಚಿತ್ತಾದರೂ ಚ್ಯುತಿಬಾರದಂತೆ- ವೇದ, ಉಪನಿಷತ್ತು, ಭಾಗವತ, ಪುರಾಣಾದಿ ಮೂಲಗಳಿಂದ ಹೆಕ್ಕಿ ತೆಗೆದು, ಪೂರ್ಣರೂಪವನ್ನೇ ಚಿತ್ರಿಸಿ ಕಾದಂಬರೀಕರಣಗೊಳಿಸಿದ್ದಾರೆ! ಈ ಬಗೆಯ ಕಾದಂಬರೀಕರಣಗೊಳಿಸಿದ ಕನ್ನಡದ ಮತ್ತು ಭಾರತೀಯ ಭಾಷೆಗಳ ಹಲವು ಖ್ಯಾತ ಕಾದಂಬರಿಕಾರರೂ ಇಂತಹ ಪ್ರಯತ್ನಮಾಡಿ ಯಶಸ್ಸುಕಂಡ ಭ್ರಮೆಯಲ್ಲಿರುವವರಾದರೂ, ಮೂಲದರ್ಶನಕ್ಕೆ ಅಪಚಾರವೆನಿಸುವಂತೆ , ಆ ಪಾತ್ರಗಳನ್ನು, ಅವುಗಳ ಸ್ವಭಾವ-ಧೋರಣೆಗಳನ್ನು ಯದ್ವಾತದ್ವಾ ತಿರುಚಿ, ಇತಿಹಾಸಕ್ಕೆ ಅಪಚಾರವೆಸಗಿದ್ದೂ ನಿಜ! ಮೂಲದ ರಸ, ರೋಚಕತೆಗಳ ಅರಿವಿಗೆ ಆ ಲೇಖಕರ ವೇದಗ್ರಹಿಕೆಯ ಮಿತಿಯಿದ್ದಿರಬಹುದಾದರೂ, ರಸ, ಶೃಂಗಾರ, ಲೇಖಕನ ಸ್ವಾತಂತ್ರ್ಯ, ಇತ್ಯಾದಿಗಳ ಹೆಸರಿನಲ್ಲಿ ಸಂಸ್ಕೃತ ಬಾರದ ಓದುಗರಿಗೆ, ಇದೇ ನಿಜವಾದ ಮಹಾಭಾರತವೆನಿಸುವಂತೆ ಮಾಡಿ ವಂಚಿಸುವುದಂತೂ ಸತ್ಯ!!
ಇರಲಿ!!
ಈಗ, ಪೂಜ್ಯ ಆಚಾರ್ಯರು ಆದಿಪರ್ವದ ಕುರಿತಾಗಿ, ೧ ಸರ್ಪಯಾಗ, ೨ ಉರ್ವಶಿ-ಪುರೂರವ, ೩ ನಹುಷ – ಬರೆದವುಗಳು ಈಗಾಗಲೇ ತಾವು ಗಮನಿಸಿದ್ದೀರಿ!
ಮತ್ತು ಇದೀಗ ೪ ಯಯಾತಿ – ಆ ಸರಣಿಯ ೪ನೇ ಕೃತಿ ಇದೀಗತಾನೆ ಬಂದಿದೆ! ಎಂದಿನ ಸುರಸುಂದರಾಂಗ ರೂಪದಲ್ಲಿ!
ಬೆಲೆ : 280/- ಮಾತ್ರ!
ಪೂಜ್ಯ ಆಚಾರ್ಯರ ಅಭಿಮಾನಿ ಓದುಗರಾದ ತಮಗೆ ಈ ಕೃತಿಯನ್ನು 250/- ರೂಪಾಯಿಗೆ ತಲುಪಿಸಬೇಕೆಂಬ ಕೈಂಕರ್ಯ ನಮ್ಮದು! ರಜಿಸ್ಟರ್ಡ್ ಅಂಚೆವೆಚ್ಚವನ್ನೂ ನಾವೇ ಭರಿಸುತ್ತೇವೆ!
ಕೆಲವರು ಹೇಳುತ್ತಾರೆ, ತಮ್ಮ ಬಳಿ ಈ ಸರಣಿಯ ಮೊದಲ ಭಾಗ – ಸರ್ಪಯಾಗ – ಇಲ್ಲ ಎಂದು. ಅದನ್ನು ಬಯಸುವವರು , ಮತ್ತೆ ಅದರ ಬೆಲೆಯನ್ನೂ ಸೇರಿಸಿ ಒಟ್ಟು ಸಂದಾಯಮಾಡಿದರಾಯಿತು!
ಹೀಗೆ 250/- ( ಸರ್ಪಯಾಗವೂ ಬೇಕಾದರೆ ಅದರದ್ದೂ ಸೇರಿಸಬೇಕು)
ನಮ್ಮ ವೆಬ್ ಸೈಟಿನ ಈ ಲಿಂಕನ್ನು ಬಳಸಿ ಬುಕ್ ಮಾಡಿ!
ಇಂದೇ ಯಯಾತಿಯ ರವಾನೆ!!
ಮತ್ತೇಕೆ ತಡ?
ನಮಸ್ಕಾರ
ಸುಬ್ರಹ್ಮಣ್ಯ , ಸಾಹಿತ್ಯ ಪ್ರಕಾಶನ