Veda Samskruthi Parichaya

2,100.00

ಪೂಜ್ಯ ಕೆಎಸ್ ನಾರಾಯಣಾಚಾರ್ಯರು, ರಾಮಾಯಣಭಾರತಭಾಗವತಗಳ ಕುರಿತಾಗಿ ಬರೆಯುವುದಕ್ಕಿಂತ ಮೊದಲೇ ವೇದಗಳ ಕುರಿತಾಗಿ, ಅತ್ಯಂತ ಸರಳವಾಗಿ, ವೇದಮಹಾರ್ಥಗಳ ಅನ್ವೇಷಕರೂಪಕವಾಗಿ, ವೈಚಾರಿಕವಾಗಿ ವಿಶ್ಲೇಷಿಸಿ ಬರೆಯಲಾರಂಭಿಸಿದರು. ಪ್ರಕಾಶಕರನ್ನು ಹುಡುಕುವ ಗೋಜಿಗೆ ಹೋಗದೆ ಬೇಂದ್ರೆಯವರ ಪ್ರೋತ್ಸಾಹದಿಂದ ಪ್ರಕಟಿಸುತ್ತಹೋದುದು ಇತಿಹಾಸ. ಹಾಗೆ ಅವರು ವೇದ ಸಂಸ್ಕೃತಿಯ ಪರಿಚಯಗಳ ೧೦ ಸಂಪುಟಗಳನ್ನು ಪ್ರಕಟಿಸಿದ್ದೂ ಮತ್ತೆಮತ್ತೆ ಮುದ್ರಿಸಿದ್ದೂ ಆಗಿ ಜನಪ್ರಿಯತೆಯನ್ನೂ ಗಳಿಸಿದ್ದು ಸರಿಯಷ್ಟೆ! ಅವುಗಳನ್ನು ಮೆಚ್ಚಿ , ಅಂಥ ಅಪರೂಪದ ಸಾಹಿತ್ಯವನ್ನು ಕೊಂಡಾಡಿದವರಲ್ಲಿ ಡಿವಿಜಿ, ಬೇಂದ್ರೆ, ಎನ್ಕೆ ಮತ್ತು ಎನ್ ಟಿ ಶ್ರೀನಿವಾಸಯ್ಯಂಗಾರ್ ಅವರಂತಹ ದೊಡ್ಡದೊಡ್ಡ ವಿದ್ವಾಂಸರೂ ಸಾಹಿತಿಗಳೂ ಸೇರಿದ್ದರು. ಆ ಕಾಲದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಆ ಮಾಲಿಕೆಯ ೨ ನೇ ಸಂಪುಟಕ್ಕೆ ಲಭಿಸಿತ್ತು. ಇದೆಲ್ಲ ಹಳೆಯ ಕತೆ. ಮುಂದೆ, ಆಚಾರ್ಯರ ಸಮಗ್ರ ಕೃತಿಗಳ ಜವಾಬ್ದಾರಿಯನ್ನು ಸಾಹಿತ್ಯ ಪ್ರಕಾಶನ ಹೊತ್ತುಕೊಂಡ ನಂತರ, ಆ ೧೦ ಸಂಪುಟಗಳನ್ನು ೩ ಬೃಹತ್ ಸಂಪುಟಗಳ ಸೆಟ್ ಮಾಡಿ, ಗಟ್ಟಿ ರಟ್ಟಿನ ಬೈಂಡಿಂಗ್, ಸುಂದರ ರಕ್ಷಾಕವಚ, ಸುರಸುಂದರ ಮುದ್ರಣ, ತಪ್ಪುಗಳೇ ಇಲ್ಲದಂತೆ ಎಚ್ಚರಿಕೆಯ ಪ್ರೂಫ್ ರೀಡಿಂಗ್, ಹಗುರತೂಕದ ಕಾಗದ…. ಹೀಗೆ ಏನೆಲ್ಲ ಶ್ರಮವಹಿಸಿ ಮುದ್ರಿಸಿ ಪ್ರಕಟಿಸಲಾರಂಭಿಸಿತು. ಹೆದಹೆದರಿಯೇ ದೊಡ್ಡ ಸಾಹಸಕ್ಕೆ, ಬೃಹತ್ ಬಂಡವಾಳಕ್ಕೆ ಕೈಹಾಕಿದ ಸಾಹಿತ್ಯ ಪ್ರಕಾಶನ ಅದರ ೩ ಮುದ್ರಣಗಳನ್ನು ವಿತರಿಸಿ ಸುಮ್ಮನಾಗುವ ಸಂದರ್ಭದಲ್ಲಿ ಮತ್ತೆ ವಿಪರೀತ ಬೇಡಿಕೆ ಹುಟ್ಟಿಬಿಟ್ಟಿದೆ. ಅದೇಅದೇ ಆಕಾಂಕ್ಷಿಗಳು ಎಲ್ಲ ಪುಸ್ತಕ ಮಳಿಗೆಗಳಲ್ಲಿ ವಿಚಾರಿಸುತ್ತಿರುತ್ತಾರೆಂಬುದು ನಿಜವಾದರೂ ಬೇಡಿಕೆ ಬಹಳವಾಗಿರುವುದೂ ನಿಜವೇ! ಇನ್ನೇನು ಈ ತಿಂಗಳ ಕೊನೆಯ ಹೊತ್ತಿಗೆ “ ವೇದ ಸಂಸ್ಕೃತಿಯ ಪರಿಚಯ” ದ ೧೦ ಭಾಗಗಳೂ ಸೇರಿದ ೩ ಬೃಹತ್ ಸಂಪುಟಗಳ ಸೆಟ್ ತಯಾರಾಗಲಿದೆ! ಈಗ ಆ ಸೆಟ್ಟಿನ ಬೆಲೆ : 2100/- ರೂ. ವಿಶೇಷವೆಂದರೆ, ಇದೇ ಮಾರ್ಚ್ 30 ರ ವರೆಗೆ ಮುಂಗಡ ಕೊಟ್ಟು ಕಾದಿರಿಸಿದರೆ , 350/- ಮತ್ತು ರಜಿಸ್ಟರ್ಡ್ ಅಂಚೆವೆಚ್ಚದ 150/- ರಿಯಾಯ್ತಿ. ಅಂದರೆ 1750/- ರೂಪಾಯಿಗಳನ್ನು ನಮ್ಮ ವೆಬ್ ಸ್ಟೋರಿಗೆ ಪ್ರವೇಶಿಸಿ, ಹಣ ಕಟ್ಟಿದರೆ ಸಾಕು, ಏಪ್ರಿಲ್ ೧ ನೇ ತಾರೀಕು ನಿಮ್ಮ ಮನೆಗೇ ಆ ವೇದ ಸಂಸ್ಕೃತಿಯ ಪರಿಚಯದ ಸೆಟ್ ತಲಪುತ್ತದೆ. ಇಂಥ ಅಮೋಘ ಜ್ಞಾನಭಂಡಾರದ ವಿಷಯದಲ್ಲಿ ಇದಕ್ಕಿಂತ ದೊಡ್ಡ ಲಾಭವಾದರೂ ಏಕೆ ಬೇಕಲ್ಲವೇ?

Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034