Sale!

ಆತ್ಮನಿವೇದನೆ : ಬನ್ನಂಜೆ ಗೋವಿಂದಾಚಾರ್ಯರು ನಿವೇದಿಸಿದ ಆತ್ಮಕಥನ

Original price was: ₹380.00.Current price is: ₹310.00.

Categories: ,

ಆಗ ೨೦೧೪ರ ಸಮಯ. “ಅಪ್ಪ ನೀವು ಯಾಕೆ ನಿಮ್ಮ ಆತ್ಮಚರಿತ್ರೆ ಬರೆಯಬಾರದು? ಇನ್ನೊಂದೆರಡು ವರ್ಷಗಳಲ್ಲಿ ನಿಮಗೆ ಎಂಬತ್ತು” ಅಂದೆ. “ಓಹ್ ಆ ನೆನಪು ಮಾಡಿಕೊಂಡು ಬರೆಯುವುದು ನನಗಾಗದು ಮಗಳೆ” ಎಂದರು ಅಪ್ಪ. “ನೀವು ಹೇಳುತ್ತಾ ಹೋಗಿ ಅಪ್ಪ ನಾನು ಬರೆಯುತ್ತೇನೆ” ಎಂದೆ. “ಇಲ್ಲ ಇಲ್ಲ, ನನ್ನ ನೆನಪಿನ ಜೊತೆ ನಿನ್ನ ಬರವಣಿಗೆಯ ವೇಗ, ನಿಧಾನ ಹೊಂದಾಣಿಕೆ ಆಗಲಿಕ್ಕಿಲ್ಲ ಮಗಳೆ” ಅಂದರು. “ಹಾಗಾದರೆ ನೀವು ದಿನದಲ್ಲಿ ಇಷ್ಟು ಎಂದು ನನಗೆ ಸಮಯ ಕೊಡಿ ಅಪ್ಪ, ಆ ಹೊತ್ತಿನಲ್ಲಿ ನಾನು ಬಂದು ನಿಮ್ಮ ಮುಂದೆ ಕುಳಿತು ನೀವು ಹೇಳಿದ್ದನ್ನು ಧ್ವನಿಮುದ್ರಣ ಮಾಡುತ್ತೇನೆ. ಕೊನೆಗೊಮ್ಮೆ ಅಕ್ಷರ ರೂಪಕ್ಕೆ ಇಳಿಸಿದರೆ ಆಯಿತು” ಎಂದೆ. ಅಪ್ಪ ಆಗಬಹುದು ಎಂದು ಹೇಳಿ ದಿನದಲ್ಲಿ ನನಗೆ ಬೆಳಿಗ್ಗೆ ಹತ್ತರಿಂದ ಹನ್ನೆರಡು (ಎರಡು ಗಂಟೆ) ಸಮಯ ಕೊಟ್ಟರು. ಹಾಗೆ ಧ್ವನಿಮುದ್ರಿತವಾದದ್ದು ಈಗ ನಿಮ್ಮ ಮುಂದೆ ಅಕ್ಷರವಾಗಿದೆ.”

ಬನ್ನಂಜೆ ಗೋವಿಂದಾಚಾರ್ಯರ ಆತ್ಮಕಥನದ ಆರಂಭದ ಪ್ಯಾರಾ ಇದು. ಆಚಾರ್ಯರು ಹೇಳಿದ್ದನ್ನ ರೆಕಾರ್ಡ್ ಮಾಡಿಟ್ಟುಕೊಂಡು ಬರಹರೂಪಕ್ಕಿಳಿಸಿದವರು ವೀಣಾಬನ್ನಂಜೆ. ಇದೇ ಆಗಸ್ಟ್ ೩ರ ಸಂಜೆ ೪ ಗಂಟೆಗೆ ಶತಾವಧಾನಿ ಆರ್ ಗಣೇಶರು ಈ ಸುರಸುಂದರ ಕೃತಿಯನ್ನು ಲೋಕಾರ್ಪಣೆಗೈದು ಮಾತನಾಡುತ್ತಾರೆ. ಈ ಪುಸ್ತಕವನ್ವು ತಾವೂ ಓದಬೇಕು. ಆ ಕುತೂಹಲ ತಮಗಿದ್ದರೆ ಇಗೋ ರಿಯಾಯ್ತಿ ಬೆಲೆಯಲ್ಲಿ , ಆಗಸ್ಟ್ ೧೬ ರ ವರೆಗೆ ಲಭ್ಯ.
ತಾವು ಮಾಡಬೇಕಾದುದಿಷ್ಟೇ.
9448110034 (Subramanya-Subbu) ನಂಬರಿಗೆ 310/- ರೂ ಗಳನ್ನು ಫೋನ್ ಪೇ/ ಗೂಗಲ್ ಪೇ ಮಾಡಿ ತಮ್ಮ ವಿಳಾಸ ಅದೇ ನಂಬರಿಗೆ ವಾಟ್ಸಾಪ್ ಮಾಡುವುದು. ಅಥವಾ ಈ ಲಿಂಕ್ ಬಳಸಿ ನಮ್ಮ ವೆಬ್ ಅಂಗಡಿಯಲ್ಲಿ ಬುಕ್ ಮಾಡುವುದು.

೫ ನೇ ತಾರೀಕಿನ ನಂತರ ವೀಣಕ್ಕ ಅವರ ಹಸ್ತಾಕ್ಷರವಿರುವ ಪ್ರತಿ ತಮ್ಮ ಮನೆಬಾಗಿಲಿಗೇ.

Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034