ಕಾನುಘಟ್ಟ-300
ಮಣ್ಣಿನ ಓದು 150
ಒಂದು ತುತ್ತಿನ ಕತೆ 180
ಕಾಡುತೋಟ 220
ಜೀವನದಿಗಳ ಸಾವಿನ ಕಥನ 150
—————————————
ಒಟ್ಟು 1000
—————————————-
ಆದರೆ, ಈಗಿನ ಲಾಕ್ ಡೌನ್ ಓದಿಗಾಗಿ
3 ಲಾಭಗಳಿವೆ.
1 50 ರೂ ರಿಯಾಯ್ತಿ ,
2 ಅವರ ಜಲವರ್ತಮಾನ ಕೃತಿ ಫ್ರೀ ,
3 ಅಂಚೆವೆಚ್ಚ ಪೂರ್ತಿ ಉಚಿತ !!
ಒಂದು ಸಲ ಪ್ರಕಟವಾದ ಪುಸ್ತಕಗಳು ಖಾಲಿಯಾದರೆ ಸಾಕಪ್ಪ, ಎನ್ನುವ ಲೇಖಕ-ಪ್ರಕಾಶಕರ ಪರಿಸ್ಥಿತಿಯ ನಡುವೆ, ಅದೂ ಪರಿಸರ ,ಕೃಷಿ, ಕೃಷಿಯಲ್ಲಿ ಅಮೋಘವಾದುದನ್ನು ಸಾಧಿಸಿ ನೆಮ್ಮದಿ- ಸಂತಸಗಳಿಂದ ಬದುಕು ಸಾಗಿಸುತ್ತಿರುವ ಅಂತ್ರಪ್ರೀನರ್ ಗಳ ಕುರಿತು ಶ್ರೀ ಶಿವಾನಂದ ಕಳವೆ ಅವರ, ೧ . ಒಂದು ತುತ್ತಿನ ಕತೆ ಮತ್ತು ೨. ಮಣ್ಣಿನ ಓದು – ಈ ಬಗೆಯ ಹಾಗೂ ಈ ಕೃತಿಗಳು ನಾಲ್ಕು ವರ್ಷಗಳಲ್ಲಿ ಮರುಮುದ್ರಣವಾಗಿವೆ! ನಮಗಂತೂ ತುಂಬ ಸಂಭ್ರಮದ ಸಂಗತಿಯಿದು!
ಕಳವೆ ಅವರ “ ಮಧ್ಯಘಟ್ಟ “ ಕಾದಂಬರಿ ಒಂದೇ ವರ್ಷದಲ್ಲಿ ನಾಲ್ಕನೇ ಮುದ್ರಣಕ್ಕೆ ಬಂದುದಲ್ಲದೇ, ಜೀವನದಿಗಳ ಸಾವಿನ ಕಥನ, ಕಾಡುತೋಟ ಮುಂತಾದ ಕೃತಿಗಳೂ ನಿರಂತರ ಬೇಡಿಕೆ ಕಾಣುತ್ತಿವೆ!
ನಾಲ್ಕು ವರ್ಷಗಳ ಹಿಂದೆ ಮೊದಲಿನೆರಡು ಕೃತಿಗಳ ಮುಖಚಿತ್ರ ಹಾಕಿದ್ದಿರೆಂದು ಫೇಸ್ ಬುಕ್ ನೆನಪಿಸಿದ ಸಂದರ್ಭದಲ್ಲಿ ಇದೆಲ್ಲ ನೆನಪಾಯಿತು! ಶಿವಾನಂದ ಕಳವೆ ಅವರ ಬರಹದಲ್ಲಿ ಸಮೃದ್ಧ ಮಾಹಿತಿ, ಅನುಭವ, ಇತಿಹಾಸಗಳೊಂದಿಗೆ ರೋಚಕತೆಯೂ ತುಂಬಿಕೊಂಡಿರುತ್ತದಾದ್ದರಿಂದ ಅವು ಮತ್ತೆಮತ್ತೆ ಓದಿಸಿಕೊಳ್ಳುತ್ತವೆ! ಸಂಕ್ಷಿಪ್ತತೆ ಮತ್ತು ನಿಖರತೆಗಳು ಕೂಡ ಅವರ ಲೇಖನಿಯ ಬಂಡವಾಳ! ಓದಿ! ಓದುವಂತೆ ಹೇಳಿ !!