“ಕವಿ-ಕಾವ್ಯಪರವಾದ ಮುಕ್ತ ಸಹೃದಯತೆ, ಬಹುಶ್ರುತ ವಿದ್ವತ್ತು. ಅಪಾರವಾದ ವಿನಯ, ಸಮತೂಕದ ವಿಮರ್ಶನ ಪ್ರಜ್ಞೆ- ಇವು ಈ ವಿವೇಚನೆಯ ನೆಲೆಗಟ್ಟು. ಬೇಂದ್ರೆಯವರ ಕಾವ್ಯದ ಮುಖ್ಯ ಆಶಯಗಳನ್ನೂ ಮಾದರಿಗಳನ್ನೂ ಪ್ರತೀಕಗಳನ್ನೂ, ಒಟ್ಟಾರೆಯಾಗಿ ಬೇಂದ್ರೆ ಕಾವ್ಯದ ನಿಲುವುಗಳನ್ನೂ, ಇದುವರೆಗೆ ಬೇಂದ್ರೆ ಕಾವ್ಯದ ಕುರಿತು ನಡೆದಿರುವ ವಿಮರ್ಶೆಯ ಹಿನ್ನೆಲೆಯಲ್ಲಿ ಮತ್ತು ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ನೀವು ಚರ್ಚೆಗೆ ಗುರಿಪಡಿಸುವುದರ ಮೂಲಕ ಬೇಂದ್ರೆಯವರ ಸಾಹಿತ್ಯದ ಮರುಪರಿಶೀಲನೆಗೆ ಹಾಗೂ ಅರ್ಥವಂತಿಕೆಗೆ ಭದ್ರವಾದ ಬುನಾದಿಯನ್ನು ಹಾಕಿ ಕೊಟ್ಟಿದ್ದೀರಿ. ಇದಕ್ಕಾಗಿ ನಿಮಗೆ ಒಬ್ಬ ಓದುಗನಾಗಿ, ನನ್ನ ಹಾರ್ದಿಕ ಅಭಿನಂದನೆಗಳು!” – ಹೀಗೆಂದು ಡಾ. ಜಿ ಎಸ್ ಆಮೂರರಿಗೆ ಪತ್ರ ಬರೆದಿದ್ದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು.
ಬೇಂದ್ರೆಯವರ ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಅರ್ಧಶತಮಾನದ ಸಂಭ್ರಮ! ಜಿ ಎಸ್ ಆಮೂರರು ಇದ್ದಿದ್ದರೆ ಶತಮಾನೋತ್ಸವ! ಧಾರವಾಡದ ಸಾಹಿತ್ಯ ದಿಗ್ಗಜರ ನೆನಪಿಗೆ ನಾವೇನಾದರೂ ಮಾಡಲೇಬೇಕಲ್ಲ—ಎಂದು ಜಿ ಎಮ್ ಹೆಗಡೆಯವರು ಸಂಪಾದಿಸಿರುವ, ಡಾ ಜಿ ಎಸ್ ಆಮೂರ ಅವರ- “ಸಮಗ್ರ ಬೇಂದ್ರೆ ವಿಮರ್ಶೆಯ” ಒಟ್ಟು ಪುಟಗಳು ೧೧೫೦. ಕೆಲಿಕೊ ಬೈಂಡಿಂಗ್, ಜಾಕೀಟು. ಸುರಸುಂದರವಾದ ಮಹಾಸಂಪುಟ. ಧೈರ್ಯ ಸಾಹಿತ್ಯ ಪ್ರಕಾಶನದ್ದು.
1250/- ಮುಖಬೆಲೆ. ಇದೇ ಮೇ 15 2025 ರ ಸಂಜೆಯ ವರೆಗೆ ರಿಯಾಯ್ತಿ ಬೆಲೆ ಅಂಚೆಯೂ ಸೇರಿಯೇ 950/- ಮಾತ್ರ. ಬೇಂದ್ರೆ- ಆಮೂರ ಎಂಬ ಸಾಹಿತ್ಯ ಋಷಿಗಳ ಕುರಿತಾದ ತಮ್ಮ ಕುತೂಹಲ ಇಮ್ಮಡಿಯಾದೀತೆಂಬ ಭರವಸೆ ನಮ್ಮದು.
Sale!
ಸಮಗ್ರ ಬೇಂದ್ರೆ ವಿಮರ್ಶೆ
Original price was: ₹1,250.00.₹900.00Current price is: ₹900.00.