Sale!

ರನ್ ದೀಪ್ತಿ ರನ್

Original price was: ₹250.00.Current price is: ₹200.00.

ನಮಸ್ತೇ!

ಕೆಲವು ಪುಸ್ತಕಗಳೇ ಹಾಗೆ! ಓದಿಯಾದ ನಂತರ ಸುಖಾಂತ್ಯದ ಅನುಭೂತಿಯ ಸವಿ ಸಿಗುತ್ತದಾದರೂ ಆ ಬದುಕು ಬವಣೆಗಳ ಹಾದಿ ಮತ್ತೆಮತ್ತೆ ಮನಕಲಕುತ್ತಿರುತ್ತಲೇ ಇರುತ್ತದೆ!
ಆಂಧ್ರದ ವರಂಗಲ್ ಜಿಲ್ಲೆಯ ಕುಗ್ರಾಮ ಈ ಕಲ್ಲೆಡ. ಅನಕ್ಷರಸ್ತ ಬಂಧುಗಳು. ಅವರ ನಡುವೆ ಆಗುವ ಹತ್ತಿರದ ರಕ್ತಸಂಬಂಧದಿಂದ ಹುಟ್ಟುವ ಅಂಗವಿಕಲ ವಂಶಾವಳಿಯ ಎಚ್ಚರ ಅವರಿಗೆ ಕೊಡುವವರಾದರೂ ಯಾರು?
ಹಾಗೊಂದು ಕೂಲಿಕಾರ, ಕಡುಬಡತನದ ದಂಪತಿಗಳಿಗೆ ಜನಿಸಿದವಳೇ ಈ ದೀಪ್ತಿ! ನೋಡಲೂ ಚಂದವಲ್ಲ, ಸೀಳುತುಟಿ. ಮಾನಸಿಕವಾಗಿಯೂ ದೈಹಿಕವಾಗಿಯೂ ದಿವ್ಯಾಂಗಳು!!
ಅಯ್ಯೋ! ಅಂತಹ ಮಗುವಿನ ಪಾಲನೆ- ಪೋಷಣೆ, ಅದೂ ಕುಗ್ರಾಮದಲ್ಲಿ!!
ಇಂತಹ ಕಷ್ಟಗಳನ್ನು ಓದುವುದು ಕೇಳುವುದು ಬೇರೆಯೇ! ಅನುಭವದ ಬವಣೆಯೇ ಬೇರೆ!
ಈ ದೀಪ್ತಿಯನ್ನು ಬರಹರೂಪದಲ್ಲಿ ತಂದವರು ನಮ್ಮ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರು! ಅವರ ಮುನ್ನುಡಿಯ ಕೆಲವು ಸಾಲುಗಳನ್ನೇ ನೀವು ಮೊದಲು ಓದಿದ್ದು.
ಭಾರತವನ್ನು ಆಕೆ ಓಲಂಪಿಕ್ ಕ್ರೀಡೆಗಳಲ್ಲಿ ಪ್ರತಿನಿಧಿಸಿ, ಭಾರತದ ಗೌರವವನ್ನೂ ಉನ್ನತಕ್ಕೇರಿಸಿ ಪದಕಗಳೊಂದಿಗೆ ಹಿಂತಿರುಗಿದ್ದು, ಪ್ರಧಾನಿ ಮೋದಿಯವರ ವಿಶೇಷ ಅತಿಥಿಯಾಗಿ “ಭೇಷ್” ಅನ್ನಿಸಿಕೊಂಡು ಗೌರವಾದರ ಪಡೆದದ್ದೂ, ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ “ಅರ್ಜುನ” ಅವಾರ್ಡ್ ಪಡೆದದ್ದೂ! ತುಂಬು ವೇದನೆಯ ಹಿತಾನುಭೂತಿ ಒದಗಿಸುವಂತಹ ವಿಶೇಷ ಕಥಾನಕ!

ನೀವೊಬ್ಬರೇ ಖಂಡಿತ ಓದುವಂತಹದಲ್ಲ ಈ ಕೃತಿ! ಮನೆ ಮಂದಿಯೆಲ್ಲರೂ ಓದಲೇಬೇಕಾದ ಅಮರಕೃತಿ! ಅರಿತುಕೊಳ್ಳಲೇಬೇಕಾದ ಜೀವಜೀವನಗಾಥೆ ಇದು!!

ಇಷ್ಟರಲ್ಲೇ ಕನ್ನಡ ಸಾರಸ್ವತ ಲೋಕಕ್ಕೂ ಬರಲಿರುವ ಈ
“ರನ್ ದೀಪ್ತಿ ರನ್”
ಅನುವಾದಿಸಿದವರು ಕತೆಗಾರ-ಕಾದಂಬರಿಕಾರ ಶ್ರೀನಿಧಿ ಕರಣಮ್ ಅವರು!

ನಿಮ್ಮ
ಸುಬ್ಬಣ್ಣ..