ನಮಸ್ತೆ,
ಕನ್ನಡದಲ್ಲಿ ತುಂಬ ಗಂಭೀರವಾಗಿಯೂ ಆಳವಾಗಿಯೂ ವಿಪುಲ ಮಾಹಿತಿಗಳೊಂದಿಗೂ ಅಷ್ಟೇ ರೋಚಕವಾಗಿಯೂ ಅಂತರ್ ರಾಷ್ಟ್ರೀಯ ಸಂಬಂಧಗಳ ಕುರಿತಾಗಿ ವಿಶ್ಲೇಷಿಸಿ ಅಂಕಣ ಬರೆಯುವವರು ಶ್ರೀ ಪ್ರೇಮಶೇಖರ ಅವರು. ಹಾಗಂತ ಅವರು ಅಂಕಣಕಾರರೆಂದು ಮಾತ್ರ ಜನಪ್ರಿಯರೇ ಎಂದರೆ, ಅಲ್ಲ, ಅವರು ಅತ್ಯುತ್ತಮ ಕತೆಗಾರರೂ ಕಾದಂಬರಿಕಾರರೂ ಹೌದು! ಕವಿಗಳು ಕೂಡ! ಸಾಹಿತ್ಯ ಪ್ರಕಾಶನವು ಅವರನ್ನು ತನ್ನ ಲೇಖಕರ ಬಳಗದಲ್ಲಿ ಸೇರಿಸಿಕೊಂಡು , ಅವರ ೬ ರಾಷ್ಟ್ರೀಯ-ಅಂತರ್ ರಾಷ್ಟ್ರೀಯ ಕುರಿತ ಬರಹಗಳ ಸಂಗ್ರಹಗಳನ್ನೂ, ೩ ಕಥಾ ಸಂಕಲನಗಳನ್ನೂ , ೨ ಮಿನಿ ಕಾದಂಬರಿಗಳನ್ನೂ ಹೊರತಂದಿದೆ!
ಅವುಗಳಲ್ಲಿ , ಇದೀಗ ಬರಲಿರುವ,
೧ ಭಾರತೀಯ ಸಾಂಸ್ಕೃತಿಕ ಅಸ್ಮಿತೆ,
೨ ಪ್ರವಾದಿಯ ಶಾಪ , ಮತ್ತು
೩ ಕೊರೋನಾ ಕೇಡುಗಾಲ
ಎಂಬ ಮೂರು ಹೊಸ ಕೃತಿಗಳೂ ಸೇರಿವೆ! ಒಂದೊಂದು ಹೊಸ ಪ್ರಕಟನೆ ಬಂದಾಗಲೂ ನಮ್ಮಲ್ಲುಂಟಾಗುವ ಸಂಭ್ರಮವೇ ಬೇರೆ!! ಕುಟುಂಬದಲ್ಲೊಬ್ಬ ಹೊಸ ಸದಸ್ಯ ಉದಿಸಿಬರುವ ಸಂತೋಷದಂಥದು ಅದು! ಅಂಥದರಲ್ಲಿ ಒಮ್ಮೆಲೆ ಮೂವರು ಬಂದುಬಿಟ್ಟರೇ!! ಮೂರೂ ಕೃತಿಗಳು ನಾನು ಹೇಳಿದಂತೆ ಸಮೃದ್ಧ ಮಾಹಿತಿ, ನಮ್ಮ ಕಲ್ಪನೆಯಲ್ಲೂ ಬಾರದಂತಹ ಐತಿಹಾಸಿಕ ತಿರುವುಗಳನ್ನು ಎತ್ತಿ ತೋರಿಸುವಂಥವು ಅಲ್ಲದೇ, ರೋಚಕ ಓದಿನವುಗಳೇ! ಮೂರರ ಒಟ್ಟು ಬೆಲೆ: ೪೫೦/-
ಆದರೆ ಈ ಆಗಸ್ಟ್ ಕೊನೆಯವರೆಗೂ 400/- ರೂ.ಗೆ ಮತ್ತು ಅಂಚೆವೆಚ್ಚವೂ ಉಚಿತವಾಗಿ ಕೊಡಬೇಕೆಂಬ ನಿರ್ಧಾರ ನಮ್ಮದು!
ಪ್ರೇಮಶೇಖರರು ತಮ್ಮ ಫೇಸ್ ಬುಕ್ ನಲ್ಲಿ ಅವುಗಳ ಮುಖಪುಟದ ಅಪೂರ್ಣ ಚಿತ್ರಗಳನ್ನು ಕೆಲದಿನಗಳ ಹಿಂದೆ ಹಾಕಿದಾಗಲೇ, ಅವರ ಓದುಗರು ಯಾವಾಗ ಹೊರಬರುತ್ತವೆ ಎಂದು ಕೇಳಿದ್ದರು. ಸದ್ಯಕ್ಕೆ ಸಾಹಿತ್ಯ ಪ್ರಕಾಶನದ ಪುಟಾಣಿ ಪ್ರತಿನಿಧಿ ಸ್ವಸ್ತಿಯ ಕೈ ತಲುಪಿವೆ! ಅಧಿಕೃತ ಬಿಡುಗಡೆಯೂ ಆಗಲಿದೆ! ಆ ಮೊದಲೇ ತಮ್ಮ ಕೈಯಲ್ಲೂ ಪುಸ್ತಕಗಳಿರಲಿ!!
ನಮ್ಮ ವೆಬ್ ಸೈಟಲ್ಲಿ