ಮನುವಾದಿಗಳು-ಮನುವಾದಿಗಳು ಎಂದು ಟೀಕಿಸುವ ವಿಚಾರವಾದಿಗಳ ಸಂಖ್ಯೆ ವಿಪುಲವಾಗಿಯೇ ಇದೆ. ಹಾಗೆ ಟೀಕೆಗೊಳಗಾಗುತ್ತಿರುವವರ ಸಂಖ್ಯೆಯೂ ದೊಡ್ಡದೇ. ಆದರೆ, ಈ ಎರಡೂ ವರ್ಗದ ಜನ ಮನುಸ್ಮೃತಿಯನ್ನು ಓದಿದವರೇ? ಏನದು ಮನುವಾದ ಎಂದರೆ ಹೇಳಬಲ್ಲವರೇ? ಖಂಡಿತ ಇಲ್ಲ. ಸುಮ್ಮನೆ ಕ್ಲೀಷೆಗಾಗಿ ಮಾತಾಡುವವರೇ ಎಲ್ಲ.
ಮನುಸ್ಮೃತಿಯಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಅಹ೯ಳಲ್ಲ ಎಂಬ ಮಾತೂ ಜಾತಿ ಶ್ರೇಣೀಕರಣದ ವ್ಯಾಖ್ಯಾನ ಮಾತ್ರವೇ ಇದೆಯೇ? ಇಲ್ಲ. ಈಗ ಮೂರುಸಾವಿರ ವರ್ಷಗಳ ಹಿಂದಿನ ಇಡೀ ರಾಜಕೀಯ-ಸಾಮಾಜಿಕ-ಧಾರ್ಮಿಕ-ಆರ್ಥಿಕ-ಶೈಕ್ಷಣಿಕ-ಕಾನೂನು ಕಟ್ಟಳೆ- ವೈದ್ಯಕೀಯ- ಆರೋಗ್ಯ-ಕೃಷಿ-ಪಶುಸಾಕಣೆ-ಮಾನವ ಸ್ವಭಾವದ ವಿಶ್ಲೇಷಣೆ ಹೀಗೆ ಇಂಥ ವಿಷಯವೇ ಅಲ್ಲಿಲ್ಲ ಎಂಬುದಿಲ್ಲವಲ್ಲ? ಸಮಗ್ರ ಭರತಖಂಡದ ವಿಶ್ವಕೋಶವೇ ಅದಾಗಿತ್ತೇ? ಆದ್ದರಿಂದಲೇ ಪಾಶ್ಚಾತ್ಯ ವಿದ್ವಾಂಸರು , ಮನುಸ್ಮೃತಿಯನ್ನು ಅಧ್ಯಯನ ಮಾಡದಿದ್ದರೆ ಭಾರತ ಅರ್ಥವಾಗುವುದೇ ಅಸಾಧ್ಯ – ಎಂದು ಅಭಿಪ್ರಾಯಪಟ್ಟುದಲ್ಲವೇ? ವಿಚಾರವಾದಿ- ಸಂಸ್ಕೃತ ಪಂಡಿತರೂ ಆಗಿದ್ದ ಚಿಂತಕರಾದ ಅಂಬೇಡ್ಕರ್ ಅವರು ಆ ಗ್ರಂಥವನ್ನು ಸಾರ್ವಜನಿಕವಾಗಿ ದಹನಮಾಡಿದ ಹಿನ್ನೆಲೆ ಏನಿದ್ದಿರಬಹುದು? ಆ ಗ್ರಂಥದ ನ್ಯೂನತೆಗಳೇನು? ಯಾವ ಕಾರಣಕ್ಕಾಗಿ ಅದನ್ನ ಅಧ್ಯಯನ ಮಾಡಬೇಕು? – ಎಂಬುದನ್ನೆಲ್ಲವನ್ನೂ ಈ ಪುಟ್ಟ ವೈಚಾರಿಕ ಪುಸ್ತಕ – “ಮನುಸ್ಮೃತಿ: ಒಂದು ವಿಶಿಷ್ಟ ಕೃತಿ”ಯಲ್ಲಿ ತಾರ್ಕಿಕ ವಿಶ್ಲೇಷಣೆಗೆ, ಯಾವ ಪೂರ್ವಾಗ್ರಹವೂ ಇಲ್ಲದ ಮನಸ್ಥಿತಿಯಿಂದಲೇ ಒಳಪಡಿಸಿದ್ದಾರೆ- ಸಂಸ್ಕೃತ ಕನ್ನಡ ಇಂಗ್ಲಿಷ್ ಭಾಷಾತಜ್ಞರೂ ವಿದೇಶದ ಯೂನಿವರ್ಸಿಟಿಗಳಲ್ಲಿ ಅಧ್ಯಯನ ಮತ್ತು ಅಧ್ಯಾಪನ ಮಾಡಿದವರೂ ಸಂಸ್ಕೃತಿ ವಿಶ್ಲೇಷಕರೂ ಆಗಿ ಹೆಸರಾಗಿರುವ ಡಾ. ಬಿ. ಭಾಸ್ಕರ ರಾವ್ ಅವರು.
ನಿಜಕ್ಕೂ ಎಲ್ಲ ಚಿಂತಕರೂ ಓದಲೇಬೇಕಾದ ವೈಚಾರಿಕ ಪುಸ್ತಿಕೆ ಈ “ಮನುಸ್ಮೃತಿ: ಒಂದು ವಿಶಿಷ್ಟ ಕೃತಿ”!
ಇಷ್ಟರಲ್ಲೇ ಹೊರಬರಲಿರುವ ಇದರ ಬೆಲೆ: 130/- ಮಾತ್ರ. ಜನವರಿ 10, 2024 ರ ವರೆಗೆ ನಮ್ಮ ವೆಬ್ ಸೈಟಿನಲ್ಲಿ ಬುಕ್ ಮಾಡಿದರೆ ಅಂಚೆವೆಚ್ಚವೂ ಸೇರಿ 120/- ಮಾತ್ರ.
Sale!
Manusmruti
Original price was: ₹130.00.₹120.00Current price is: ₹120.00.