ಮೋದಿ @ 20 – ಇದೊಂದು ತುಂಬ ಗಮನಾಹ೯ ಕೃತಿ. ದೇಶದ ಬೇರೆಬೇರೆ ಕ್ಷೇತ್ರಗಳ ಗಣ್ಯರು ಕಂಡಂತೆ ನಮ್ಮ ಹೆಮ್ಮೆಯ ನರೇಂದ್ರ ಮೋದಿಯವರ ಜೀವನ, ಧೇಯ್ಯ, ಮನೋಸ್ಥೈರ್ಯ, ಕಾರ್ಯಶೈಲಿಗಳು ಹೇಗಿವೆ? ಜಾಗತಿಕ ನಾಯಕರಾಗಿ ಕಂಗೊಳಿಸುತ್ತಿರುವ ಅವರಲ್ಲಿ ಒಬ್ಬ ವೇದಾಂತಿಯೂ ಸಾಹಸಿಯೂ ಅರ್ಥಶಾಸ್ತ್ರಜ್ಞನೂ ಬದುಕಿನ ಮೌಲ್ಯ ಶೋಧಕನೂ ಇದ್ದಾನೆಯೇ? ಈ ದೇಶವನ್ನು ಎತ್ತರೆತ್ತರಕ್ಕೆ ಏರಿಸುತ್ತಲೇ ಲೋಕದ ಎಲ್ಲರೂ ಸುಖವಾಗಿ ಬಾಳಬೇಕೆಂಬ ಹಂಬಲವೂ ಇದೆಯೇ? ಚಿಕ್ಕಚಿಕ್ಕ ಕೆಲಸಗಳಿಂದಲೇ ಅದೆಷ್ಟು ಉನ್ನತ ಸ್ಥಾನಕ್ಕೂ ಏರಿ , ವ್ಯಾಪಕ ಜನಮನ್ನಣೆಗೂ ಪಾತ್ರರಾಗಬಹುದೆಂಬ ಅತಿ ವಿಸ್ಮಯಕಾರೀ ಉದಾಹರಣೆಯನ್ನು ನೋಡುವ ಭಾಗ್ಯ ಈ ತಲೆಮಾರಿನದು!
ಈ ಪುಸ್ತಕದ ಲೇಖಕರು ಯಾರೆಲ್ಲ ಎಂಬುದು ಕೂಡ ವಿಸ್ಮಯಕಾರಿಯೆ.
ಪಿವಿ ಸಿಂಧು,ಜೈಶಂಕರ್, ನಂದನ್ ನಿಲೇಕಣಿ,ಸುಧಾಮೂರ್ತಿ,ಡಾ ದೇವಿಶೆಟ್ಟಿ , ಸದ್ಗುರು , ಅಜಿತ್ ದೋವಲ್, ಅನುಪಮ್ ಖೇರ್ …. ಇನ್ನೂ ಬಹಳ ಸಾಧಕರು. ಸಾಧಕರೇ ಬರೆದು ಒಪ್ಪಿಸಿದ ಸಾಧಕರೋರ್ವರ ಅಪೂರ್ವ ಜೀವನಗಾಥೆಯಿದು. ಓದಲೇಬೇಕಾದ ಕುತೂಹಲಕಾರಿ ಕಥೆಯಿದು!
ಇಂಗ್ಲಿಷ್ ನಿಂದ ಸೊಗಸಾಗಿ ಅನುವಾದ ಮಾಡಿದವರು ಕನ್ನಡದ ಶ್ರೇಷ್ಠ ಅನುವಾದಕ ಶ್ರೀ ಜಯಪ್ರಕಾಶ ನಾರಾಯಣ ಅವರು. ಇಂಗ್ಲಿಷ್ ರೂಪಾದ್ದರಷ್ಟೇ ಸೊಗಸಾಗಿ ತಂದವರು ಸಾಹಿತ್ಯ ಪ್ರಕಾಶನದವರು.
ಕನ್ನಡದ ಹೆಮ್ಮೆಯ ಕೃತಿಯಿದು!
ಓದುವ ಭಾಗ್ಯ ನಿಮ್ಮದು!
ಪ್ರಕಟನಾಪೂರ್ವ ಬೆಲೆ 575/-ಮಾತ್ರ! ನಮ್ಮ ವೆಬ್ ಸ್ಟೋರಿಗೆ ಈಗಲೇ ಬನ್ನಿ! ಮೇ 10 ರ ಒಳಗೆ ಕೃತಿ ನಿಮ್ಮ ಕೈಯಲ್ಲಿ!
Sale!
ಮೋದಿ @ 20
Original price was: ₹649.00.₹575.00Current price is: ₹575.00.