ಪ್ರಿಯರೇ,
ಇಂದು “ವಿಶ್ವ ಜಲದಿನ” “ವಿಶ್ವ ಅರಣ್ಯದಿನ” – ಎಂದೆಲ್ಲ ಪತ್ರಿಕೆಗಳಲ್ಲಿ ಸರಕಾರೀ ಜಾಹೀರಾತುಗಳು, ಹಲವರ ಸಂದರ್ಶನಗಳು, ಕಾರ್ಯಕ್ರಮಗಳು, ಮುಂತಾಗಿ ಸುದ್ದಿಗಳು ಬಂದಿವೆ. ಇದೇ ಸಂದರ್ಭದಲ್ಲಿ ತುಂಬ ಆರೋಗ್ಯದಾಯಕ ಸುದ್ದಿಯೊಂದನ್ನು ತಮ್ಮೊಂದಿಗೆ ಸಾಹಿತ್ಯ ಪ್ರಕಾಶನವು ಹಂಚಿಕೊಳ್ಳುತ್ತಿದೆ.
ಈ ವಿಷಯಗಳಲ್ಲಿ ನಮ್ಮ ನಾಡು ಕಂಡ ಅಪರೂಪದ ಅರಣ್ಯತಜ್ಞ-ಜಲತಜ್ಞರು ಮಾತ್ರವಲ್ಲ, ಅದೇ ತಮ್ಮ ಸರ್ವಸ್ವವನ್ನಾಗಿ ಮಾಡಿಕೊಂಡು, ಚಟುವಟಿಕೆ-ಅಭ್ಯಾಸ-ಅಧ್ಯಯನ-ಸಂಚಾರ-ಜಾಗೃತಿ-ಶಿಕ್ಷಣ-ಬರವಣಿಗೆ- ಹೀಗೆ ಬಹುವಿಧದಲ್ಲಿ ನಿರತರಾದವರೆಂದರೆ ಶ್ರೀ ಶಿವಾನಂದ ಕಳವೆ ಅವರು!
ಅವರ ಬರಹಗಳು ಅದೆಷ್ಟು ರೋಚಕವೂ ಜ್ಞಾನಸಮೃದ್ಧಿಯಾಗಿಯೂ ಇರುತ್ತವೆಂಬುದು ತಮಗೆ ಗೊತ್ತು. ಅವರ ಕಾದಂಬರಿಗಳ ನಾಯಕಪಾತ್ರ ನಿರ್ವಹಿಸುವವೂ ನೀರು ಕಾಡು ಪರಿಸರ ಕೃಷಿಗಳೇ ಅಲ್ಲವೇ?
ಅವರ ಪುಸ್ತಕಗಳ ಓದಿಗಾಗಿ ತುಂಬ ಜನ ಕಾತರದಿಂದ ಕಾಯುತ್ತಲೂ ಇರುತ್ತಾರೆ.
ಅಂತಹ ಎಲ್ಲ ಕನ್ನಡ ಓದುಗರಿಗೆ ಈ ದಿನ ಸಾಹಿತ್ಯ ಪ್ರಕಾಶನದಿಂದೊಂದು ಸಂಭ್ರಮದ ಸುದ್ದಿ.
ಏಪ್ರಿಲ್ 12 ನೇ ತಾರೀಕು ಶಿವಾನಂದ ಕಳವೆ ಅವರ ಎರಡು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ!
೧ ಮುಚ್ಚದಿರಲಿ ಜಲದ ಕಣ್ಣು
ಕೆರೆಯ ನೋಡಿರೋ,
೨ ಕಾಡು ಲೋಕದ ಯಾತ್ರೆ
ಮೇಷ್ಟ್ರ ಗಿರಿ.
ಇನ್ನೂ ಸಂಭ್ರಮದ ಸಂಗತಿ ಗೊತ್ತೇ?
ಆ ಎರಡು ಕೃತಿಗಳ ಒಟ್ಟು ಬೆಲೆ-450/- ರೂಪಾಯಿ.
ಇದೇ 31 ನೇ ತಾರೀಕಿನೊಳಗೆ ಕಾಯ್ದಿರಿಸುವವರಿಗಾಗಿ ಈಗಿನ ದುಬಾರಿ ಅಂಚೆವೆಚ್ಚವೂ ಸೇರಿ 400/- ರೂಪಾಯಿಗಳಿಗೆ ಅವುಗಳನ್ನು ತಮ್ಮ ವಿಳಾಸಕ್ಕೇ ತಲುಪಿಸುವ ಆಲೋಚನೆ ನಮ್ಮದು.
ಬಿಡುಗಡೆಯ ಹೊತ್ತಿಗೆ ತಮ್ಮ ಕೈಯಲ್ಲಿ ಆ ಎರಡು ಹೊಸ ಪುಸ್ತಕಗಳು!
ಶಿವಾನಂದ ಕಳವೆ ಅವರ ಹಸ್ತಾಕ್ಷರ ಸಮೇತ!
ತಾವು ಮಾಡಬೇಕಾದುದಿಷ್ಟೇ!
ನಮ್ಮ ವೆಬ್ ಸ್ಟೋರಿನಲ್ಲಿ ಬುಕ್ ಮಾಡಿ, ಅಥವಾ
9448110034 (Subbu/ Subramanya) ನಂಬರಿಗೆ ಫೋನ್ ಪೇ/ ಗೂಗಲ್ ಪೇ ಮಾಡಿ ವಿಳಾಸ ಅದೇ ನಂಬರಿಗೆ ವಾಟ್ಸಾಪ್ ಮಾಡೋದು!
-ಸಾಹಿತ್ಯ ಪ್ರಕಾಶನ.