Sale!

ದೂತವಾಕ್ಯ

Original price was: ₹185.00.Current price is: ₹169.00.

ಶತಶತಮಾನಗಳಿಂದ ಅಡವಿಯ ಹೊಕ್ಕುಳಲ್ಲಿ ತನ್ನ ಪಾಡಿಗೆ ಇದ್ದಂತಹ ಅಜ್ಞಾತವಾದ ಒಂದು ಪುಟ್ಟ ಸಂಸ್ಥಾನವನ್ನು ವಿನಾಕಾರಣ ಮುಘಲ್ ಸಾಮ್ರಾಜ್ಯವು ಕೆಣಕುತ್ತದೆ. ಆ ಸಂಸ್ಥಾನದ ಅಸ್ತಿತ್ವಕ್ಕೇ ಕಂಟಕ ಒದಗುತ್ತದೆ.
ಈ ಕೇಂದ್ರಬಿAದುವಿನ ಸುತ್ತ ಹೆಣೆದುಕೊಂಡಿರುವ “ದೂತವಾಕ್ಯ”, ೧೭ನೇ ಶತಮಾನದ ಒಂದು ಕೀಲಕಘಟ್ಟದಲ್ಲಿ ನಡೆಯುವ ಕಾದಂಬರಿ. ಅನೇಕ ರೋಚಕ ಘಟನೆಗಳನ್ನೊಳಗೊಂಡ ಈ ಕೃತಿಯು ಆ ಕಾಲದ ಭಾರತದ ರಾಜಕೀಯ ಪರಿಸ್ಥಿತಿ, ಸಮಾಜದ ಚಿತ್ರಣ, ಜನಜೀವನ, ಸಂಚು – ಒಳಸಂಚುಗಳು, ಮುಘಲ್ ಅಂತಃಪುರದ ಒಳಗುಟ್ಟುಗಳು ಹಾಗು ಇನ್ನೂ ಅನೇಕ ವಿವರಗಳಿಂದ ಪರಿಪ್ಲುತವಾಗಿದೆ. ಈ ಎಲ್ಲದರ ನೇಪಥ್ಯದಲ್ಲಿ ನಡೆಯುವ ಕಥಾನಕವು ಮಾನವಸ್ವಭಾವ ಹಾಗು ಧಾರ್ಮಿಕ ಮೌಲ್ಯಗಳ ಹಲವು ಪಾರ್ಶ್ವಗಳನ್ನು ಸ್ಪರ್ಶಿಸುತ್ತದೆ.
ಈ ಕಾದಂಬರಿಯ ಮುಖ್ಯವಸ್ತುವಿಗೆ ಅಂಟಿಕೊAಡಿರುವ ಇತಿಹಾಸದ ಕೆಲವು ಸೂಕ್ಷ್ಮ ಅಂಶಗಳು ಕನ್ನಡದಲ್ಲಿ ಬಂದಿರುವಂತಹ ಐತಿಹಾಸಿಕ ಕಾದಂಬರಿಯ ಪರಂಪರೆಗೆ ವಿನೂತನವೆನ್ನಬಹುದು.
ಇತಿಹಾಸ ತಜ್ಞರೂ ಇಂಗ್ಲಿಷ್ ಲೇಖಕರೂ ಆಗಿ ಹೆಸರಾಗಿರುವ ಗಂಭೀರ ಚಿಂತಕ ಶ್ರೀ ಸಂದೀಪ್ ಬಾಲಕೃಷ್ಣ ಅವರ ಮೊದಲ ಕನ್ನಡ ಕಾದಂಬರಿಯಿದು! ಅದೂ ಹೃದ್ಯ ಮತ್ತು ಆ ಕಾಲಮಾನಕ್ಕೆ ಸೂಕ್ತವೆನಿಸುವಂತಹ ಸೊಗಸಾದ ಕನ್ನಡದಲ್ಲಿ!!
ಓದಿ ಸವಿಯಿರಿ!

Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034