ನಮಸ್ಕಾರ
ನಮ್ಮಲ್ಲಿ ಶ್ರೀಗುರು ಚರಿತ್ರೆ ಪಾರಾಯಣ ಮಾಡುವ ಅತಿ ದೊಡ್ಡ ಭಕ್ತಪರಂಪರೆಯೇ ಇದೆ. ಗುರು ಚರಿತ್ರೆ, ದತ್ತ ಭಾಗವತ, ಇತ್ಯಾದಿ ಕೃತಿಗಳ ಸಣ್ಣ ದೊಡ್ಡ ಗ್ರಂಥಗಳನ್ನು ಪ್ರಕಟಿಸಿದ ಪ್ರಕಾಶಕರ ಸಂಖ್ಯೆಯೂ ದೊಡ್ಡದೇ! ಅವುಗಳಿಗೆ ನಿರಂತರ ಗ್ರಾಹಕರೂ ಪಾರಾಯಣ ಮಾಡುವವರೂ ಇದ್ದೇ ಇದ್ದಾರೆ! ಬೀದರ್ ನಿವಾಸಿ ದೊಡ್ಡ ಕವಿಗಳೂ ಲೇಖಕರೂ ಆಧ್ಯಾತ್ಮ ಸಾಧಕರೂ ಆಗಿರುವ ಹಂಶಕವಿ ಎಂಬ ಕಾವ್ಯನಾಮದಿಂದ ಜನಪ್ರಿಯರಾಗಿರುವ ಶ್ರೀ ವಲ್ಲೇಪುರೆ ಎಂಬವರು ಇತ್ತೀಚೆಗಷ್ಟೆ “ ಶ್ರೀದತ್ತ ಭಾಗವತ” ಎಂಬ ಬೃಹತ್ ಗಾತ್ರದ ಸಂಪುಟವನ್ನು ಪ್ರಕಟಿಸಿದ್ದು ತುಂಬ ಕುತೂಹಲದ ವಿಷಯ!
ದತ್ತ ಚರಿತ್ರೆಯನ್ನು ಪಾರಾಯಣ ಮಾತ್ರವಲ್ಲ, ದತ್ತಾವತಾರದ ಎಲ್ಲ ರೂಪಗಳನ್ನೂ ಅವರು ಕೂಲಂಕಶವಾಗಿ ಅಧ್ಯಯನ ಮಾಡಿ , ದೇಶದ ಎಲ್ಲ ದತ್ತ ಕ್ಷೇತ್ರಗಳ ಪ್ರವಾಸ ಮಾಡಿ ೮-೧೦ ವರ್ಷಗಳ ಭಕ್ತಿಪೂರ್ವಕ ತಪಸ್ಸಿನಂತಹ ಕಾರ್ಯಫಲವಾಗಿ ಅವರು ಪ್ರಕಟಿಸಿದ ಸಂಪುಟವದು! ಈಗ ಮೂರುನಾಲ್ಕು ವರ್ಷಗಳ ಹಿಂದೆ, ಶ್ರೀ ವಿಜಯ ಸಂಕೇಶ್ವರ ಅವರನ್ನು ಭೇಟಿಮಾಡಿ ಈ ಪುಸ್ತಕದ ಮಹತ್ವವನ್ನು ವಿವರಿಸಿದಾಗ, ಶ್ರೀ ಸಂಕೇಶ್ವರ ಅವರು ಒಂದಷ್ಟು ಹಣವನ್ನು ಕೊಟ್ಟು , ಇವರ ಸಾಹಸಕ್ಕೆ ಶುಭಹಾರೈಸಿ ಬೀಳ್ಕೊಟ್ಟರಂತೆ! ಅಷ್ಟಕ್ಕೆ ಅವರದನ್ನು ಮರೆತುಬಿಟ್ಟಿದ್ದರು! ಆ ಸಹಾಯವನ್ನು ನೆನಪಿಟ್ಟುಕೊಂಡು , ಸುಮಾರು 3-4 ವರ್ಷಗಳ ನಂತರ, ಆ ಗ್ರಂಥವು ಮುದ್ರಣವಾಗಿ ಬಂದಾಗ, ಮೊದಲ ಪ್ರತಿಯನ್ನು ಕೊಟ್ಟದ್ದು ಶ್ರೀ ವಿಜಯ ಸಂಕೇಶ್ವರರಿಗೆ! ಅದರ ಗಾತ್ರಕ್ಕೆ, ಲೇಖಕರ ಶ್ರಮಕ್ಕೆ, ಅದು ಏಳೆಂಟು ಭಾಷೆಗಳಲ್ಲೂ ಪ್ರಕಟವಾಗುತ್ತಿದೆಯೆಂಬ ವಿಚಾರಕ್ಕೆ- ತುಂಬ ಬೆರಗಾಗಿ ಸಂಕೇಶ್ವರರು ಲೇಖಕ ಹಂಶಕವಿಗಳನ್ನು ಬೆಳಗಿನ ಉಪಾಹಾರಕ್ಕೆ ಮನೆಗೆ ಆಹ್ವಾನಿಸಿದರು! ಅಲ್ಲಿ ಆ ಗ್ರಂಥದ ಬೆಲೆ 1100/- ರೂಪಾಯಿಗಳೆಂಬುದನ್ನು ನೋಡಿ, “ ಪುಸ್ತಕದ ಬೆಲೆ ಯೋಗ್ಯವಾಗಿರಬಹುದು; ಆದರೆ , ಎಲ್ಲರೂ ಓದಬೇಕೆಂದು ಅಪೇಕ್ಷಿಸುವ ತಾವು , ಈ ಬೆಲೆ ಸಾಮಾನ್ಯ ದತ್ತಭಕ್ತರಿಗೆ, ಪಾರಾಯಣಾಪೇಕ್ಷಿಗಳಿಗೆ – ಈ ದೊಡ್ಡ ಮೊತ್ತವನ್ನು ಕೊಟ್ಟು ಖರೀದಿಸಲು ಸಾಧ್ಯವೇ? ಎಂಬುದನ್ನು ಯೋಚಿಸಬೇಕಲ್ಲ? “- ಎಂದು ಸಲಹೆಕೊಟ್ಟುದು ಮಾತ್ರವಲ್ಲ, “ಇದನ್ನು 200/- ರೂಪಾಯಿಗಳಿಗೆ ಎಲ್ಲರಿಗೂ ಕೊಡಿ, ತಮಗಾಗುವ ಆ ನಷ್ಟವನ್ನು ನಾನು ಭರಿಸುತ್ತೇನೆ” ಎಂಬ ಆಶ್ವಾಸನೆಯನ್ನೂ ಕೊಟ್ಟು ಆ ಕ್ಷಣವೇ ಈಡೇರಿಸಿಯೂಬಿಟ್ಟರು! ಮಾರನೇ ದಿನ ಪತ್ರಿಕೆಗಳಲ್ಲಿ ಸುದ್ದಿಯೂ ಬಂತು: “ 1100/- ರೂಪಾಯಿ ಬೆಲೆಯ ಶ್ರೀದತ್ತ ಭಾಗವತ” ಕೇವಲ 200/- ರೂಪಾಯಿಗಳಿಗೆ ಲಭ್ಯ!”ಎಂದು . ನಮ್ಮ ಅಂಗಡಿಗೆ ಬಹಳ ಗ್ರಾಹಕರ ವಿಚಾರಣೆ. ತಮ್ಮ ಬಳಿ ಲಭ್ಯವಿದೆಯಾ? ಯಾವಾಗ ದೊರಕಿಸಿಕೊಡುತ್ತೀರಿ?… ಎಂದು. ಶ್ರೀ ವಿಜಯ ಸಂಕೇಶ್ವರರನ್ನು ಕೇಳಿದಾಗ, ಅವರ ಬಳಿ ಒಂದೇಒಂದು ಪ್ರತಿಯನ್ನಿರಿಸಿಕೊಂಡುದಾಗಿಯೂ ಮಾರನೇದಿನವೇ ಒಂದು ಬಾಕ್ಸ್ ನಮ್ಮ ಅಂಗಡಿಗೆ ತಲುಪಿಸುವಂತೆ ಲೇಖಕರಿಗೆ ತಿಳಿಸುವುದಾಗಿಯೂ ಹೇಳಿ ಹಾಗೆ ಮಾಡಿಯೂ ಬಿಟ್ಟರು! ನಮ್ಮಲ್ಲಿ ಅರ್ಧಗಂಟೆಯಲ್ಲಿ ಅವೆಲ್ಲವೂ ಖಾಲಿ!! ಒಂದೆರಡು ದಿನಗಳಲ್ಲಿ ಎಲ್ಲ ಸಾವಿರ ಪ್ರತಿಗಳೂ ಖರ್ಚಾಗಿಬಿಟ್ಟವಂತೆ!!
ನಂತರದ ವಿಷಯ ತುಂಬ ಮಹತ್ವದ್ದು! ಶ್ರೀ ವಿಜಯ ಸಂಕೇಶ್ವರ ಅವರೇ ತುಂಬ ಮುತುವರ್ಜಿ ವಹಿಸಿ , ತುಂಬ ಅಚ್ಚುಕಟ್ಟಾಗಿ ಪ್ರಕಟಿಸಿದ್ದು! ಮೊದಲ ಮುದ್ರಣದ ಗಾತ್ರ, ಅಕ್ಷರ, ಕಾಗದ, ಬೈಂಡಿಂಗ್ ಗಳನ್ನೆಲ್ಲ ಸುಧಾರಿಸಿ, ತುಂಬ ಸುಂದರವಾಗಿಯೂ ಓದುಗಸ್ನೇಹಿಯಾಗಿಯೂ ಹೊರತಂದಿದ್ದಾರೆ!! 1208 ಪುಟಗಳ ಬೃಹತ್ ಗಾತ್ರದ ಸಂಪುಟ, ಹಗುರಾತಿ ಹಗುರ – ದುಬಾರಿ ಬೆಲೆಯ ಕಾಗದ, ಸೆಕ್ಶನ್ ಬೈಂಡಿಂಗ್ – ಬಾಳಿಕೆಯ ರಟ್ಟುಕಟ್ಟಿ, ಆಕರ್ಷಕ ಅರ್ಥಪೂರ್ಣ ಚಿತ್ರದ ಜಾಕೇಟ್ , ಮತ್ತೆ ಮೇಲೊಂದು ಪ್ಲಾಸ್ಟಿಕ್ ಕವಚ!!! ಬೆಲೆ ಎಷ್ಟು ಗೊತ್ತೇ?? ಕೇವಲ ಎರಡು ನೂರು – (200/- ) ಮಾತ್ರ. ಅಂಚೆ/ ಕೊರಿಯರ್ ವೆಚ್ಚ 50/- ಸೇರಿ 250/-
ನಾಡಿನ ದತ್ತಾನುಯಾಯಿಗಳೂ ಗುರುಚರಿತ್ರೆಯನ್ನು ಪಾರಾಯಣ ಮಾಡುವ ಲಕ್ಷಾಂತರ ಭಕ್ತರೂ ಶ್ರೀ ವಿಜಯ ಸಂಕೇಶ್ವರರ ಉದಾರತೆಗೆ ಋಣಿಗಳಾಗದೆ ಇರುತ್ತಾರೆಯೆ?
ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ – ಪ್ರಧಾನ ವಿತರಣೆಯ ಕೆಲಸ ಹೊತ್ತುಕೊಂಡು, ನಾಡಿನ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಈ ಗ್ರಂಥ ದೊರೆಯುವಂತೆ ಮಾಡುತ್ತಿದೆ! ಬರುವ 26 ನೇ ತಾರೀಕು ದಿಗ್ವಿಜಯ ಸ್ಟುಡಿಯೋದಲ್ಲಿ ಇದರ ಬಿಡುಗಡೆಯೂ ಜರುಗಲಿದೆ!
ತಮ್ಮ ಪ್ರತಿಗಳನ್ನು ಕಾಯ್ದಿರಿಸುವ ಕೆಲಸ ಆಸಕ್ತರು ಆರಂಭಿಸಬಹುದು!
ದಯವಿಟ್ಟು ಈ ಮಾಹಿತಿಯನ್ನು ತಮ್ಮವರೆಲ್ಲರಲ್ಲೂ ಹಂಚಿಕೊಳ್ಳಿ!
ಒಂದು ಬಾಕ್ಸ್ ನಲ್ಲಿ 25 ಪ್ರತಿಗಳಿರುತ್ತವೆ! ಕೊಂಡಿಟ್ಟರೆ, ಕಾಣಿಕೆಯಾಗಿ ಕೊಡಲು ಅತ್ಯತ್ತಮ ಗ್ರಂಥವೂ ಹೌದು!!