ವಿಕ್ರಮ್ ಸಂಪತ್ ಅವರ ಮತ್ತೊಂದು ಕೃತಿ ಕನ್ನಡಕ್ಕೆ ಬರುತ್ತಿದೆ: ಇದೇ 26 ನೇ ತಾರೀಕು ಭಾನುವಾರ ಬೆಳಗ್ಗೆ 10.30 ಕ್ಕೆ ಎಸ್ ಎಲ್ ಭೈರಪ್ಪನವರೇ ಲೋಕಾರ್ಪಣ ಮಾಡುತ್ತಾರೆ. ಇಂಗ್ಲಿಷ್ ನಲ್ಲಿ ಪ್ರಚಂಡ ಮಾರಾಟ ಕಂಡಿರುವ Bravehearts of Bharat ಇದರ ಅನುವಾದ ಮಾಡಿದವರು ಕನ್ನಡದ ಹಿರಿಯ ಲೇಖಕಿ – ಅನುವಾದಕಿ ಎಲ್ ವಿ ಶಾಂತಕುಮಾರಿ. ಅವರೂ ಅಲ್ಲಿ ಇರುತ್ತಾರೆ. “ಭಾರತದ ಧೀರ ಚೇತನಗಳು”. ಭೈರಪ್ಪನವರ ಬೆನ್ನುಡಿ ನೋಡಿ:
ವಿಕ್ರಮ್ ಸಂಪತ್ ಅವರು ಬರೆಯುವ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಲೇಖನಗಳಾದರೂ ತುಂಬ ಯೋಗ್ಯತೆಯುಳ್ಳದ್ದೂ ನಂಬಿಕೆಗೆ ಅಹ೯ವಾದುದೂ ಆಗಿರುತ್ತವೆ. ಅವರು ತುಂಬ ಆಳವಾಗಿಯೂ ವ್ಯಾಪಕವಾಗಿಯೂ ಅಧ್ಯಯನ ಮಾಡದೇ ತಿಳಿದುಕೊಳ್ಳದೇ ಏನನ್ನೂ ಬರೆಯುವುದಿಲ್ಲ. ಅವರ ಅಧ್ಯಯನ ಮತ್ತು ಅಧ್ಯಯನ ಸಾಮಗ್ರಿಗಳ ಸಂಗ್ರಹಗಳೇ ತುಂಬ ಪರಿಶ್ರಮದಾಯಕವಾದುದು. ಇತಿಹಾಸಕ್ಕೆ ಸಂಬಂಧಪಟ್ಟ ಸಂಗತಿಯನ್ನೋ ವ್ಯಕ್ತಿಯನ್ನೋ ಕುರಿತು ಅವರು ಸಾಕಷ್ಟು ಆಧಾರಗಳಿಲ್ಲದೇ ಬರೆಯುವುದಿಲ್ಲ. ಸತ್ಯವೇ ಅವರ ಬರಹದ ಜೀವಾಳ. ಶೈಲಿಯೂ ಅಷ್ಟೇ ಮೊನಚಾಗಿರುತ್ತದೆ. ಇತಿಹಾಸವಾದರೂ ಕತೆಕಾದಂಬರಿಯಂತೆ ಓದಿಸಿಕೊಳ್ಳುತ್ತದೆ.
ನಮ್ಮ ದೇಶದ ಸ್ವಾತಂತ್ರ್ಯಾನಂತರದ ರಾಜಕಾರಣದ ದುರದ್ದೇಶಗಳಿಂದಾಗಿ, ದೇಶಕ್ಕೆ ದಾಳಿಯಿಟ್ಟು, ಕ್ರೌರ್ಯ – ಲೂಟಿ- ಮತಾಂತರಗಳೇ ಅವರ ಆಡಳಿತದ ನೀತಿಯನ್ನಾಗಿಸಿಕೊಂಡು ನಮ್ಮ ಸನಾತನ ದೇಶದ ಸಂಸ್ಕೃತಿಯನ್ನು ಹಾಳುಮಾಡಿದವರನ್ನೇ ವೈಭವೀಕರಿಸಲಾಯಿತು. ದೇಶಕ್ಕಾಗಿ ಸಮಾಜಕ್ಕಾಗಿ ಆತ್ಮಗೌರವಕ್ಕಾಗಿ ಅಂತಹ ದಾಳಿಕೋರರೊಂದಿಗೆ ಹೋರಾಡಿದ ನಮ್ಮ ವೀರರನ್ನು ನಮ್ಮ ಮಕ್ಕಳಿಂದಲೂ ಓದುಗರಿಂದಲೂ ದೂರವೇ ಇರಿಸಲಾಯಿತು. ವಿಕ್ರಮ್ ಸಂಪತ್ ಮತ್ತು ಇಂತಹ ಹೊಸ ತಲೆಮಾರಿನ ಸ್ವತಂತ್ರ ಮನೋಭಾವದ ಅಧ್ಯಯನಶೀಲರ ಬರಹಗಳಿಂದಾಗಿ ವಿಸ್ಮೃತಿಗೊಳಗಾಗಿದ್ದ ಅಂತಹ ವೀರರೂ ಸತ್ಯಸಂಗತಿಗಳೂ ನಮ್ಮ ತಿಳಿವಳಿಕೆಗೆ ಎಟುಕುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.
– ಎಸ್ ಎಲ್ ಭೈರಪ್ಪ
ಕಾರ್ಯಕ್ರಮದ ವಿಶೇಷವೆಂದರೆ, ಈ ಸಲ ವಿಕ್ರಮ್ ಅವರೊಂದಿಗೆ ಸಂವಾದವೂ ಇರುತ್ತದೆ. ಊಟದ ಯೋಚನೆಬಿಟ್ಟು ಬನ್ನಿ ಅವತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.