Sale!

ಅಮೀಬಾ-ಆತ ಆಫ್ರಿಕಾವನ್ನೇ ಗೆದ್ದನು

Original price was: ₹450.00.Current price is: ₹360.00.

ಯಂಡಮೂರಿಯವರು ಮೊನ್ನೆ ಅಂದರೆ 12-4-25 ರಂದು ಲೋಕಾರ್ಪಣೆ ಆದ ಸಂದರ್ಭದಲ್ಲೇ ಹೇಳಿದರು: “ಬೇರಾವ ನನ್ನ ಪುಸ್ತಕಗಳ ಕುರಿತೂ ನಾನು ಹಾಗೆ ಹೇಳುವುದಿಲ್ಲ. ಈ “ಅಮೀಬಾ-ಆತ ಆಫ್ರಿಕಾವನ್ನೇ ಗೆದ್ದನು” – ಇದೊಂದು ತುಂಬ ಒಳ್ಳೆಯ ಪುಸ್ತಕವೆಂದು ಖಂಡಿತವಾಗಿಯೂ ಹೇಳುತ್ತೇನೆ. ಕೈಗಾರಿಕೋದ್ಯಮಿಯೊಬ್ಬರು 400/- ತಿಂಗಳ ಸಂಬಳದ ಕೆಲಸದಿಂದ ಇವತ್ತು 26000 ಜನಕ್ಕೆ ಉದ್ಯೋಗದಾತನಾಗಿ, ಆಫ್ರಿಕಾವನ್ನೇ ಆರ್ಥಿಕವಾಗಿ ಚೇತರಿಸಿಕೊಳ್ಳುವಂತೆ ಮಾಡಿದ, ಅಲ್ಲಿಯ ಜರ್ಮನ್-ಬ್ರಿಟನ್ ಕೈಗಾರಿಕಾ ಮಾಫಿಯಾವನ್ನು ಒಬ್ಬಂಟಿಯಾಗಿ ಎದುರಿಸಿ, ಭಾರತಕ್ಕೇ ದೊಡ್ಡ ಗೌರವವನ್ನು ತಂದುಕೊಟ್ಟ ಎಮ್ ಎಸ್ ವರಪ್ರಸಾದ್ ಅವರ ಜೀವನಪಯಣವಿದು. ಕ್ರೈಸಿಸ್ ಮ್ಯಾನೇಜ್ಮೆಂಟ್ ಕುರಿತಾಗಿ ಕನ್ನಡದಲ್ಲಿ ಬಂದ ಮೊದಲ ಕೃತಿಯಿದು. ನೀವು ಓದಿ; ಅದಾಗದಿದ್ದರೆ ನಿಮ್ಮ ಮಕ್ಕಳಿಗಾದರೂ ಓದಲುಕೊಡಿ” – ಎಂದು.
ರೋಚಕ ಕಾದಂಬರಿಗಿಂತ ವೇಗವಾಗಿ ಓದಿಸಿಕೊಳ್ಳುವ ಈ “ಅಮೀಬಾ”ವನ್ನು ಓದಿಮುಗಿಸುವ ಹೊತ್ತಲ್ಲಿ ನಾವೂ ಕೂಡ ಹೊಸ ಬೆಳಕನ್ನು ಶೋಧಿಸಿರುತ್ತೇವೆ. ಓದಿನೋಡಿ.
ಗಣೇಶಭಟ್ಟ ಕೊಪ್ಪಲತೋಟ ಅವರ ಸೊಗಸಾದ ಅನುವಾದದಲ್ಲಿ ಕನ್ನಡದ್ದೇ ಕೃತಿಯಾಗಿ ಬಂದಿರುವ ಇದರ ಬೆಲೆ- ಅಂಚೆವೆಚ್ಚವೂ ಸೇರಿ ಸದ್ಯಕ್ಕೆ 410/- ಮಾತ್ರ. ಮೊದಲ ಆವೃತ್ತಿಯ ಪ್ರತಿಗಳು ಮುಗಿವ ಮೊದಲೇ ತರಿಸಿಕೊಂಡುಬಿಡಿ

Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034