ಯಂಡಮೂರಿ ವೀರೇಂದ್ರನಾಥ್ ಸಾಹಿತ್ಯಪ್ರಿಯರಿಗೊಂದು ಸಿಹಿಸುದ್ದಿ! ಅವರದೊಂದು ಹೊಸಕೃತಿ ಬರಲಿದೆ! “೨೧ ಒಳ್ಳೆಯ(ತನದ) ಕಥೆಗಳು” ಎಂತ. ತಮ್ಮ ಸೋದರ ಡಾ. ಯಂಡಮೂರಿ ಕಮಲೇಂದ್ರನಾಥ್ ಅವರೊಡಗೂಡಿ ಮಾಡಿದ ಕಥಾಸಂಕಲನವಿದು! ಕಮಲೇಂದ್ರನಾಥ ಅವರು ತುಂಬ ಕುಶಲ, ಕಲಾತ್ಮಕ, ರೋಚಕತೆ ಉಳಿಸಿಬೆಳೆಸುತ್ತ ಹೋಗುವ ಪಳಗಿದ ಕತೆಗಾರರೆಂಬುದರ ಸುಳಿವು ಇಲ್ಲಿ ನೀಡಿದ್ದಾರೆ. ಯಂಡಮೂರಿಯವರಂತೂ ಗೊತ್ತೇಯಿದೆ ನಮಗೆ!
ಒಟ್ಟು ೨೧ ಅಪೂರ್ವ ಕತೆಗಳ ಈ ಗುಚ್ಛದ ಬೆಲೆ: ೨೧೦/- ರೂ ಮಾತ್ರ. ಅಂಚೆವೆಚ್ಚ ೩೦/- ಸೇರಿ ೨೪೦/- ರೂ. ಆದರೆ ಮುದ್ರಣಪೂರ್ವ ರಿಯಾಯ್ತಿಯಾಗಿ ಕೇವಲ ೨೦೦/- ರೂ. ಗಳಿಗೆ ಈ ಹೊಸಕೃತಿ ತಮ್ಮ ಕೈಯಲ್ಲಿ!
ತಾವು ನಮ್ಮ ವೆಬ್ ಸ್ಟೋರಿಗೆ ಹೋಗಿ ಈಗಲೇ ಬುಕ್ ಮಾಡಿಬಿಡಿ.
ಅಥವಾ, 9448110034 ನಂಬರಿಗೆ 200/- ರೂ ಗಳನ್ನು ಫೋನ್ ಪೇ/ ಗೂಗಲ್ ಪೇ ಮಾಡಿ, ತಮ್ಮ ವಿಳಾಸವನ್ನು ಅದೇ ನಂಬರಿಗೆ ವಾಟ್ಸಾಪ್ ಮಾಡಿ.
10 ನೇ ಜನವರಿ 2024 ರ ಒಳಗಾಗಿ ಮಾತ್ರ ಈ ರಿಯಾಯ್ತಿ! ವರ್ಷದ ಆರಂಭಿಕ ಓದಿಗಾಗಿಯೆಂಬಂತೆ ಈ ಕುತೂಹಲಭರಿತ, ರಸಾಸ್ವಾದದ ಕೃತಿ ಅಷ್ಟರೊಳಗೆ ತಮ್ಮ ಕೈಯಲ್ಲಿ.
ಅಂದಹಾಗೆ, ಈ ಕೃತಿಯನ್ನು ಮೂಲದ ಎಲ್ಲ ಸ್ವಾದಸೊಗಸುಗಳೊಂದಿಗೆ ಅನುವಾದಿಸಿಕೊಟ್ಟವರು ಸಾಫ್ಟ್ ವೇರ್ ವೃತ್ತಿಯಲ್ಲಿರುವ , ಕನ್ನಡ- ಸಂಸ್ಕೃತ- ತೆಲುಗು- ಇಂಗ್ಲಿಷ್ ಭಾಷಾಪ್ರವೀಣರೂ ಅಷ್ಟಾವಧಾನಿಗಳೂ ಆದ ಶ್ರೀ ಗಣೇಶಭಟ್ಟ ಕೊಪ್ಪಲತೋಟ ಅವರು.
ಮುಂದಿನ ಓದಿನ ಹಿತ ತಮ್ಮದು!!