ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಲಿಸದ ಆಧ್ಯಾತ್ಮಿಕ ಬಂಧುವೋ, ಆತ್ಮಜಿಜ್ಞಾಸುವೋ, ಆಸ್ತಿಕ ಚಿಂತಕನೋ ನಮ್ಮ ನಾಡಿನಲ್ಲಿ ಇದ್ದಾರೆಯೇ? ಬೆಳಗಿನ ವಾಕಿಂಗ್ ಸಮಯದಲ್ಲಿ, ಕಾರಿನಲ್ಲಿ, ಸಂಜೆ ದೇವಸ್ಥಾನದ ಆವರಣದಲ್ಲಿ ಅವರ ಯೂಟೂಬ್ ಮುದ್ರಿಕೆಗಳನ್ನು ಕಿವಿಗೆ ಸಿಕ್ಕಿಸಿಕೊಂಡು ಕೇಳುತ್ತ ಹೋಗುವ ಸಾವಿರಸಾವಿರ ಜನಗಳಿದ್ದಾರಲ್ಲವೇ? ಅವರ ಮಾತುಗಳೇ ಹಾಗೆ. ಪಂಡಿತರಿಗೂ ಬೇಕು, ಪಾಮರರಿಗೂ ಬೇಕು. ವಿದ್ಯಾರ್ಥಿಗಳಿಗೆ ಆಕರ್ಷಕವೆನಿಸಿದರೆ, ಗೃಹಿಣಿಯರಿಗೆ ಅದೆಷ್ಟು ಭಕ್ತಿಪರವಶ!
ಅವರ ಪುಸ್ತಕಗಳೇನೂ ಕಡಿಮೆಯೇ? ನಾಡಿನಲ್ಲಿ ನಿರಂತರವಾಗಿ ಜನ ಕೊಳ್ಳುತ್ತಿರುವ, ಕೊಂಡು ಓದುತ್ತಿರುವ, ಮತ್ತೆಮತ್ತೆ ಓದಿ ಮನನ ಮಾಡುತ್ತಿರುವ ಕೃತಿಗಳವು! ಮನವನ್ನು ಆಕರ್ಷಿಸಿ ಹಿಡಿದಿಟ್ಟುಕೊಂಡು ಸಂಸ್ಕಾರವೊದಗಿಸುವ ಅಪ್ಪಟ ರುಚಿಯ ಸಾಹಿತ್ಯ ಅವರದು!
ದೊಡ್ಡ ಪುಸ್ತಕಗಳು…. ಓದಲು ಸಮಯ ಕಡಿಮೆ, ತಾಳ್ಮೆಯೂ ಇಲ್ಲ….ಪ್ರವಚನ ಅರರ್ಧ ಕೇಳುವಲ್ಲಿ ಯಾಕೋ ತುಂಡಾಗಿಬಿಡುತ್ತದೆ….. ಎನ್ನುವವರಿಗೂ, ಅವರ ಉಪನ್ಯಾಸಗಳಲ್ಲಿ ಸಹಜವಾಗಿ ಮಿಂಚಿನಂತೆ ತೂರಿಬರುವ ಒಂದೇ ಸಾಲಿನ ಚಿಂತನೆಗಳೂ ಮನೆಗೆ ಬರುವಷ್ಟರಲ್ಲಿ ಮರೆತುಹೋಗಿರುತ್ತದೆ, ನೆನಪು ಮಾಡಿಕೊಂಡು ಬರೆದಿಟ್ಟುಕೊಂಡಾಗಲೂ ಮೂಲದ ಸತ್ವವುಳಿದಂತೆನಿಸದು – ಎಂದು ಪೇಚಾಡುವವರ ಸಂಖ್ಯೆಯೂ ದೊಡ್ಡದೇ. ಅಂಥವರಿಗಾಗಿಯೇ, ಬನ್ನಂಜೆ ಗೋವಿಂದಾಚಾರ್ಯರ ಮೇಲಿನ ಭಕ್ತಿ – ಅಭಿಮಾನಗಳಿಂದಾಗಿ, ಅಕ್ಕ ವೀಣಕ್ಕ , ಬನ್ನಂಜೆಯವರ ಉಪನ್ಯಾಸಗಳಲ್ಲಿಯ ನೂರಾರು ನಲ್ನುಡಿಗಳ ಪುಟ್ಟ ಗೊಂಚಲೊಂದನ್ನು ಮಾಡಿದ್ದಾರೆ. “ ಬನ್ನಂಜೆ ಉವಾಚ” ಎಂದದನ್ನು ಹೆಸರಿಸಿದ್ದಾರೆ. ಪುಟವೊಂದರಲ್ಲಿ ನಾಲ್ಕೈದು ನಲ್ನುಡಿಗಳು ಮಾತ್ರ! ಅಷ್ಟು ಓದಿದರೆ ಎರಡು ತಾಸುಗಳ ಕಾಲ, ಮನಮಂಥನಕ್ಕೆ ದಾರಿಯಾದೀತು. ವೇದಉಪನಿಷತ್ತುಗಳ ರಸಕವಳವನ್ನೇ ಮೆದ್ದಂತಾದೀತು!
ಇನ್ನೇನು, ಈ ಪುಟಾಣಿ ಕೃತಿ ಮುಂದಿನ ವಾರದಲ್ಲಿ ಪುತ್ತಿಗೆ ಮಠದ ಶ್ರೀಗಳಿಂದ ನಮ್ಮ ಕೈ ಸೇರಲಿದೆ.
ಬೆಲೆ ಎಷ್ಟಿರಬಹುದು ಊಹಿಸಿ! ಬರೀ ಒಂದು ನೂರು. ತಮ್ಮ ಮನೆಮಕ್ಕಳಿಗೂ ನೆರೆಹೊರೆಯ ಮಕ್ಕಳಿಗೂ ಇದಕ್ಕಿಂತ ಆರೋಗ್ಯಕಾರಕ ಚಾಕಲೇಟ್ ಯಾವುದಿದ್ದೀತು? ಗೃಹಿಣಿಯರಿಗೆ ಸಂದರ್ಭಾನುಸಾರ ಕೊಡಲು ಇದಕ್ಕಿಂತ ಉಪಯುಕ್ತ ಬಾಗೀನವೆಲ್ಲಿ ಸಿಕ್ಕೀತು? ಕನ್ನಡದ ಮನೆಮನೆಗಳಲ್ಲೂ ಈ “ಬನ್ನಂಜೆ ಉವಾಚದ” ನಾಲ್ಕಾರಾದರೂ ಪ್ರತಿಗಳಿರಬೇಕು, ಮನೆಯ ಎಲ್ಲ ಕೋಣೆಗಳಲ್ಲೂ ಎಲ್ಲರಿಗೂ ಇದು ಕೈಗೆಟುಕುವಂತಿರಬೇಕು, ಎಂಬುದು ಪ್ರಕಟಿಸಿರುವ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಸಂಕಲ್ಪ!
ಅಂತೆಯೇ ಐದು ಪ್ರತಿಗಳಿಗೆ 450/- ಮಾತ್ರ! ಹತ್ತಕ್ಕೆ 850/- ಮಾತ್ರ!! ಅಂಚೆವೆಚ್ಚವೂ ಉಚಿತ!
ಕಾರ್ಯಕ್ರಮ ತಪ್ಪಿಸಿಕೊಳ್ಳುವಂತಿಲ್ಲ! ಬನ್ನಿ!
ಪ್ರತಿಗಳಿಗಾಗಿ ಈ ಲಿಂಕನ್ನು ಬಳಸಿ ನಮ್ಮ ವೆಬ್ ಸ್ಟೋರ್ ನಲ್ಲಿ ಬುಕ್ ಮಾಡಿ. ಅಥವಾ 9448110034 – ಸುಬ್ರಹ್ಮಣ್ಯ ನಂಬರಿಗೆ ಫೋನ್ ಪೇ ಮಾಡಿ ವಿಳಾಸವನ್ನು ವಾಟ್ಸಾಪ್ ಮಾಡಿ.