ಬನ್ನಂಜೆ ವೀಣಕ್ಕ ಅವರ ಮಾತುಗಳಿಗೆ ಕಿವಿಯಾಗುವುದಾಗಲೀ, ಬರಹಗಳಿಗೆ ಕಣ್ಣಾಗುವುದಾಗಲೀ ಕನ್ನಡದ ಅದೆಷ್ಟು ಓದುಗರಿಗೆ ಸಂಭ್ರಮದ ವಿಷಯ ಅಲ್ಲವೇ?
ಅಕ್ಕ ವೀಣಕ್ಕಳ ಸಾಧನೆ, ಸ್ವಾಧ್ಯಾಯ, ಬದುಕಿನ ಕಠೋರ ಸತ್ಯವನ್ನು ಕಠೋರವಾಗಿಯೇ, ಯಾವ ಮುಚ್ಚುಮರೆಯಿಲ್ಲದೇ, ಶೋಧಿಸಹೊರಡುವ ಪರಿ, ನಿತ್ಯನಡಾವಳಿಗಳಲ್ಲೂ – ಮಾತಿನಲ್ಲೂ ತುಂಬಿತುಂಬಿ ನೀಡುವ ಶುದ್ಧಾತಿಶುದ್ಧ ಪ್ರೀತಿ ಬೇಕಾದಷ್ಟು ಜನರ ಅನುಭವಕ್ಕೆ ಬಂದಂಥದೇ. ಆ ವಿಷಯದಲ್ಲಿ ನಾನಂತು ತುಂಬ ಪುಣ್ಯವಂತ. ಲೇಖಕಿ- ಪ್ರಕಾಶಕ ಎಂಬ ಶುದ್ಧ ವ್ಯಾವಹಾರಿಕ ಸಂಬಂಧಗಳನ್ನು ಮೀರಿದ ಬಾಂಧವ್ಯ ಅದು. ಕಲ್ಹಳ್ಳಿಗೆ ಬಂದು ನೆಲೆಯೂರಿದ ಹೊಸತರಲ್ಲಿ ಭೈರಪ್ಪನವರು ಅಲ್ಲಿಗೆ ಬಂದಿದ್ದ ಕೆಲವು ದಶಕಗಳ ಹಿಂದಿನಿಂದಲೂ ಅಕ್ಕ ಅಲ್ಲೊಂದು ಕೆರೆ ಕಟ್ಟಿಸಿದ್ದಾರೆ, ದೊಡ್ಡ ಸಾಧಕಿ, ಓರ್ವ ಅವಧೂತ ಹೆಣ್ಣುಮಗಳು ….ಭೈರಪ್ಪನವರನ್ನು ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಕಲ್ಲಹಳ್ಳಿಯಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಅವರೇ ಬಿಟ್ಟುಹೋದರು ….ಎಂಬೆಲ್ಲ ಮಾತುಗಳನ್ನು ಅವರಿವರಿಂದ ಕೇಳುತ್ತಿದ್ದೆ. ಅದೃಷ್ಟವೆಂಬಂತೆ ಶ್ರೀ ಪ್ರತಾಪಸಿಂಹ ಅವರಿಂದಾದ ಸಂಪರ್ಕ ಸುಮಾರು ಹತ್ತು ಹನ್ನೆರಡು ವರ್ಷಗಳಿಂದಲೂ ಗಟ್ಟಿಯಾಗಿದೆ. ವರ್ಷಕ್ಕೆರಡು ಬಾರಿ ಕಲ್ಹಳ್ಳಿಗೆ ಹೋಗಿಬರಲೇಬೇಕೆಂಬ ಹಂಬಲವುಂಟಾಗುತ್ತದೆ.
ಅಕ್ಕ, ವೀಣಕ್ಕ ಅವರ ನಿರರ್ಗಳ ಮಾತುಗಳು ಲೀಲಾಜಾಲವಾಗಿ ಬರುವುದೇ ಅಂತರಾಳದಿಂದ. ಅಂತೆಯೇ ಬರಹಗಳು ಸಹ. ನನಗಂತೂ ತುಂಬ ಖುಷಿಯುಂಟು ಮಾಡುವಂಥವು. ನಿಮಗೂ ಹಾಗೆಯೇ ಅಲ್ಲವೇ?
ಬರುವ 9 ನೇ ತಾರೀಕು ಬನ್ನಿ. ಎಂಥೆಂಥವರ ಮಾತುಗಳಿಗೆ ಕಿವಿಯಾಗುವ ಸಂಭ್ರಮ!
ಅದಕ್ಕಿಂತ ಹೆಚ್ಚಾಗಿ ಅಂದು ವೀಣಕ್ಕ ಅವರ ಮೂರು ಕೃತಿಗಳ ಲೋಕಾರ್ಪಣೆ. ಓದುವ ಭಾಗ್ಯ ನಮ್ಮೆಲ್ಲರದು! ಅವುಗಳ ಒಟ್ಟು ಬೆಲೆ 350/- ಈಗಲೇ ಕಾಯ್ದಿರಿಸಿದರೆ ಅಂಚೆವೆಚ್ಚವೂ ಸೇರಿ 300/- ಮಾತ್ರ. ತಮ್ಮ ಮನೆಗೆ 12 ನೇ ತಾರೀಕಿನೊಳಗೆ ತಲಪಿಸುವ ಹೊಣೆ ನಮ್ಮದು.
ನಿಮ್ಮ
ಸುಬ್ರಹ್ಮಣ್ಯ