ನಮಸ್ಕಾರ!
ಇದೇ ವಾರದಲ್ಲಿ , ಕನ್ನಡದ ಜನಪ್ರಿಯ ಅಂಕಣಕಾರ, ದೇಶವಿದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧ – ನೆಲೆಗಳ ಏಕೈಕ ಸಮರ್ಥ ವಿಶ್ಲೇಷಕ ಪ್ರೊ ಪ್ರೇಮಶೇಖರ ಅವರ ಮೂರು ವಿಭಿನ್ನ ಕೃತಿಗಳು ಸಾಹಿತ್ಯ ಪ್ರಕಾಶನದಿಂದ ಬಂದುವಷ್ಟೆ! ಹಾಗೆಯೇ, ಇಂದು ಮತ್ತೆರಡು ಕೃತಿಗಳು ಬಂದವು! ಈ ಎರಡು ಕೃತಿಗಳ ಲೇಖಕರು ಶ್ರೀ ಡಿ ವಿ ಗುರುಪ್ರಸಾದ್ ಅವರು! ಐಪಿಎಸ್ ಅಧಿಕಾರಿಗಳಾಗಿ ಈಗ ಹತ್ತು ವರ್ಷಗಳ ಹಿಂದೆ ಅವರು ನಿವೃತ್ತರಾಗುವ ಮೊದಲು ಎಲ್ಲ ಉನ್ನತ ಹುದ್ದೆಗಳನ್ನೂ ನಿಭಾಯಿಸಿದ ದೊಡ್ಡ ಅನುಭವ ಅವರದಾಗಿತ್ತು. ನಂತರ ಅವರನ್ನರಸಿಕೊಂಡುಬಂದ ಹುದ್ದೆಗಳೇನು ಕಡಮೆಯೇ? ನಾಡಿನ ಅತಿದೊಡ್ಡ ವಿದ್ಯಾಸಂಸ್ಥೆಯ ಸಿಇಓ , ತರಬೇತುದಾರ, ತರುಣರಿಗೆ ವ್ಯಕ್ತಿತ್ವ ಮತ್ತು ಕೌಶಲಗಳ ಮಾರ್ಗದರ್ಶಕ, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡದ ಎಲ್ಲ ಪತ್ರಿಕೆಗಳಲ್ಲದೆ , ಇಂಗ್ಲಿಷ್ ಪತ್ರಿಕೆಗಳಿಗೂ ಹೆಚ್ಚು ಬೇಡಿಕೆಯ ಜನಪ್ರಿಯ ಅಂಕಣಕಾರರಾಗಿ ತುಂಬ busy ಯಾಗಿರುವ ಅವರ ಅನುಭವ ನಿಜಕ್ಕೂ ಅಚ್ಚರಿದಾಯಕ!! ಶ್ರೀಯುತರ “ ನೀವು ಒಮ್ಮೆ ಫೇಲ್ ಆಗಲೇಬೇಕು!” – ಎಂಬ ಮಾಲಿಕೆಯ ೩ ಕೃತಿಗಳನ್ನು ಸಾಹಿತ್ಯ ಪ್ರಕಾಶನ ಪ್ರಕಟಿಸಿದ್ದು ಸರಿಯಷ್ಟೆ. ಇದೀಗ ಮತ್ತೆರಡು ಕೃತಿಗಳನ್ನು ಹೊರತಂದಿದೆ! ೧. ಕೊಲೆ ಆರೋಪಿಯಾದ ಸಿನೆಮಾ ತಾರೆ – ಮತ್ತಿತರ ನೈಜ ಕ್ರೈಂ ಕತೆಗಳು , ಮತ್ತು ೨. ಮುಂಬೈ ದಾಳಿ : ಪಾತಕಿ ಬಿಚ್ಚಿಟ್ಟ ರಹಸ್ಯ – ಎಂಬವು! ಪೋಲಿಸ್ ಅಧಿಕಾರಿಗಳಾಗಿ ಇವರು ಇಂತಹ ವಿಷಯ- ವಸ್ತುಗಳನ್ನು ಬರೆದರೆ ಅದಕ್ಕೊಂದು ಗೌರವ, ಘನತೆಯಿರುತ್ತದೆ! ಸಿಕ್ಕಿದ್ದನ್ನೆಲ್ಲ ವೈಭವೀಕರಿಸಿ, ಮಸಾಲೆ ಸೇರಿಸಿ ಬರೆಯಲಾರರು! ಜತೆಗೆ ನೈಜ ಬರಹಗಾರರೂ ಇವರು! ಆ ಕ್ರೈಂ ಘಟನೆಗಳ ಪೊಲೀಸ್ ತನಿಖೆ ಮತ್ತು ವರದಿಗಳನ್ನೇ ಆಧರಿಸಿದ ಲೇಖನಗಳಿವರದು!! ವಸ್ತುವಿನಲ್ಲೇ ಕುತೂಹಲ, ರೋಚಕತೆ ತುಂಬಿರುವಾಗ ಹೊರಗಿನಿಂದ ಸುಗಂಧವನ್ನೋ ಮಸಾಲೆಯನ್ನೋ ಏಕಾದರೂ ಸೇರಿಸಬೇಕು ಎನ್ನುವಂತಹ ಲೇಖನಗಳ ಸಂಗ್ರಹ ಈ : “ ಕೊಲೆ ಆರೋಪಿಯಾದ ಸಿನಿಮಾ ತಾರೆ”!
೨. ಮುಂಬೈ ದಾಳಿ: ಅಜ್ಮಲ್ ಕಸಬ್ ಎಂಬೊಬ್ಬ ಜೀವಂತ ಸಿಕ್ಕ ಪಾತಕಿ ಬಿಚ್ಚಿಟ್ಟ ರಹಸ್ಯವೆಲ್ಲ ಅಲ್ಲಿದೆ. ಭಾರತದ ವಿರುದ್ಧ ಪಾಕ್ ಸರಕಾರ ಮತ್ತು ಇಸ್ಲಾಮ್ ಉಗ್ರಗಾಮಿಗಳು ತಮ್ಮಂಥವರನ್ನು ಸೇರಿಸಿಕೊಂಡು ತರಬೇತಿ ಕೊಡುವ ವಿಧಾನದಿಂದ ಮೊದಲಾಗಿ, ಎಲ್ಲ ಪಾತಕೀಕೃತ್ಯವನ್ನೂ ಬಿಚ್ಚಿ ಹೇಳಿದ ಕರಾಳ ಕಥೆಯ ಯಥಾವತ್ ವರದಿಯ ಪುಟ್ಟ ಪುಸ್ತಕವಿದು! ಮೊದಲೇ ಹೇಳಿದಂತೆ, ಉನ್ನತ ಪೊಲೀಸ್ ಅಧಿಕಾರಿಯೋರ್ವರ ಬರಹವಾದ್ದರಿಂದ ಸತ್ಯ ಮಾತ್ರ ಕಂಡುಬರುವ ರೋಚಕ ಕರಾಳ ಇತಿಹಾಸದ ವರದಿ!
ಮುದ್ರಣವಾಗಿ ಇದೀಗ ಬಂದಿವೆಯಷ್ಟೆ. ಇಷ್ಟರಲ್ಲೆ ಅಧಿಕೃತವಾಗಿ ಬಿಡುಗಡೆಯಾಗಲಿವೆ! ಸಾಹಿತ್ಯ ಪ್ರಕಾಶನದ ಪುಟಾಣಿ – ಪುಸ್ತಕಪ್ರೇಮಿ ಸ್ವಸ್ತಿಯ ಕೈಯಲ್ಲಾಗಲೇ ಇವೆ. ಇನ್ನೇಕೆ ತಡ? ನಿಮ್ಮ ಕೈಗೂ ಒಪ್ಪಿಸಿಕೊಂಡು ಬಿಡಿ!
ಮೂಲ ಬೆಲೆ ( ಎರಡಕ್ಕೂ ಸೇರಿ) 250/-
ಈಗಿನ ರಿಯಾಯ್ತಿ ಬೆಲೆ: 200/- ಮಾತ್ರ!!
ಸಾಹಿತ್ಯ ಪ್ರಕಾಶನದ ವೆಬ್ಸೈಟ್ ನಲ್ಲಿ ಹೋಗಿ ಖರೀದಿಸಲು ಈ ಕೆಳಗಿನ ಲಿಂಕ್ ಚಿಟಿಕೆ ಹೊಡೆದರೆ ಸಾಕು!
DVGuruprasad 2 new
ಓದಿನ ಮಜಾ ನಿಮ್ಮ ಮತ್ತು ನಿಮ್ಮ ಮನೆಯ ಎಲ್ಲರದಾಗಲಿ!!
ನಮಸ್ತೆ!